ಲಾರಿ ಮೇಲೆ ದಾಳಿ, ಪ್ಲಾಸ್ಟಿಕ್ ಕಪ್ ವಶ

10-hvr-07
Published on

ಹಾವೇರಿ: ನಿಷೇಧಿತ ಪ್ಲಾಸ್ಟಿಕ್ ಕಪ್​ಗಳನ್ನು ನಗರದಲ್ಲಿನ ಅಂಗಡಿಗೆ ಸಾಗಿಸುತ್ತಿದ್ದ ಲಾರಿಯನ್ನು ನಗರಸಭೆ ಅಧಿಕಾರಿಗಳು ಪತ್ತೆ ಮಾಡಿ ಸಂಬಂಧಪಟ್ಟ ಅಂಗಡಿ ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪೌರಾಯುಕ್ತ ಬಸವರಾಜ ಜಿದ್ದಿ ನೇತೃತ್ವದಲ್ಲಿ ನಗರದ ಯಾಲಕ್ಕಿ ಓಣಿಯ ವಿಘ್ನೕಶ್ವರ ಟ್ರೇಡರ್ಸ್​ಗೆ ಸಾಗಿಸುತ್ತಿದ್ದ ಲಾರಿಯ ಮೇಲೆ ದಾಳಿ ನಡೆಸಿ ಕಪ್​ಗಳನ್ನು ವಶಕ್ಕೆ ಪಡೆಯಲಾಯಿತು. ಲಾರಿಯಿಂದ ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ ಮೂರು ಬಾಕ್ಸ್ ಪ್ಲಾಸ್ಟಿಕ್ ಕಪ್ ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಹೇಂದ್ರ ಜೈನ್ ಎಂಬುವರಿಗೆ ಸೇರಿದೆ. ಈ ಸಂದರ್ಭದಲ್ಲಿ ನಗರಸಭೆ ಪರಿಸರ ಇಂಜಿನಿಯರ್ ಚಂದ್ರಕಾಂತ ಗುಡ್ಡನವರ, ರಮೇಶ ಮುಂಜೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net