ಲಸಿಕೆ ವಂಚಿತ ಮಕ್ಕಳಿಗೆ ಇಂದ್ರಧನುಷ್ ಕೊಡಿಸಿ

IMG-20230807-WA0004
Published on

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಕಿವಿಮಾತು | ಶಿವಾಜಿ ನಗರ ಆರೋಗ್ಯ ಕೇಂದ್ರದಲ್ಲಿ ಅಭಿಯಾನಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿವಿಧ ರೋಗ ನಿರೋಧಕ ಲಸಿಕೆಗಳಿಂದ ವಂಚಿತವಾಗಿರುವ  ೦.೫ ವರ್ಷದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲು  ಇಂದ್ರಧನುಷ್ ಅಭಿಯಾನ ಆರಂಭಿಸಲಾಗಿದ್ದು, ರುಬೆಲ್ಲಾ ಧಡಾರ ಇನ್ನಿತರ ರೋಗಳಿಂದ ಮಕ್ಕಳನ್ನು ರಕ್ಷಣೆ ಮಾಡಲು  ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸಲಹೆ ನೀಡಿದರು.
ಸೋಮವಾರ ನಗರದ ರಿಂಗ್‌ರೋಡ್‌ನಲ್ಲಿರುವ ಶಿವಾಜಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದುಬೈ ಕಾಲೋನಿ ಸರ್ಕಾರಿ ಯುನಾನಿ ಆಸ್ಪತ್ರೆಗಳಲ್ಲಿ  ೦-೫ ವರ್ಷದ ಮಕ್ಕಳಿಗೆ  ಲಸಿಕೆ ಹನಿ ಹಾಕುವ ಮೂಲಕ ಮಿಷನ್ ಇಂದ್ರ ಧನುಷ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಮೊದಲನೆ ಸುತ್ತು ಆ.೭ ರಿಂದ ೧೨ ರವರೆಗೆ, ಎರಡನೇ ಸುತ್ತು ಸೆ. ೧೧ರಿಂದ ೧೬ ರವರೆಗೆ ಹಾಗೂ ಮೂರನೇ ಸುತ್ತು ಅ.೯ ರಿಂದ ೧೪ ರವರೆಗೆ ಲಸಿಕಾ ಅಭಿಯಾನ ನಡೆಸಲಾಗುವುದು. ಈ ವೇಳೆಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಇಲ್ಲವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಕೊಡಿಸುವಂತೆ ತಿಳಿಸಿದರು.
ಮಕ್ಕಳಿಗೆ ದಡಾರ ರುಬೆಲ್ಲಾ ರೋಗಗಳ ಲಕ್ಷಣಗಳು (ಜ್ವರ, ದದ್ದು, ಮೂಗು ಸೋರುವಿಕೆ, ರೆಡ್ ಐಸ್)ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು. ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ ಲಸಿಕೆ ವಿವರ  ಯುವಿನ್ ಪೋರ್ಟಲ್‌ನಲ್ಲಿ ದಾಖಲಿಸಿ ಇ-ಲಸಿಕಾಕರಣ ಪ್ರಮಾಣ ಪತ್ರ ಸೃಜಿಸಿ ನೀಡಲಾಗುವುದು. ಎಲ್ಲರು ಸೇರಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಜಿಪಂ ಸಿಇಒ  ಭಂವರಸಿAಗ್ ಮೀನಾ ಮಾತನಾಡಿ, ತಾಯಿ ಕಾರ್ಡ್ ಎಲ್ಲಾ ಪಾಲಕರು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಮಕ್ಕಳ ಬೆಳವಣಿಗೆ ಪೌಷ್ಟಿಕತೆ ಲಸಿಕೆಗಳ ಸಂಪೂರ್ಣ ಮಾಹಿತಿಯಿದ್ದು, ಪ್ರತಿಯೊಬ್ಬರು ತಪ್ಪದೇ ವಯಸ್ಸಿಗೆ ಅನುಗುಣವಾಗಿ ಆಯಾ ಲಸಿಕೆ ಸಮೀಪದ ಸರ್ಕಾರಿ ಆಸ್ಪತೆ ಅಥವಾ ಅಂಗನವಾಡಿ ಕೇಂದ್ರದಲ್ಲಿ ಉಚಿತವಾಗಿ ಕೊಡಿಸಬಹುದು ಎಂದು ಹೇಳಿದರು.
ಉತ್ತಮ ಗುಣಮಟ್ಟದ ಆಸ್ಪತ್ರೆಯೆಂದು ರಾಷ್ಟç ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸಂಧ್ಯಾರಾಣಿ ಹಾಗೂ ಸಿಬ್ಬಂಧಿ ವರ್ಗದವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜಶೇಖರ ಮಾಲಿ ಸ್ವಾಗತಿಸಿದರು. ಜಿಲ್ಲಾ ಸರ್ಜನ್ ಡಾ.ಅಂಬರಾಯ ರುದ್ರವಾಡಿ, ಆಡಳಿತಾಧಿಕಾರಿ ವೈದ್ಯಾಧಿಕಾರಿ ಡಾ.ವಿನೋದ ಉಪಳಾಂವಕರ್, ಕ್ಷಯ ರೋಗ ನಿರ್ಮೂಲನೆ ಅಧಿಕಾರಿ ಡಾ.ಚಂದ್ರಕಾAತ ನರಿಬೋಳ, ಪ್ರಾಚಾರ್ಯ ರವಿಕಾಂತಿ ಖ್ಯಾತನಾಳ, ಸುರೇಶ ಮೇಕಿನ ಸೇರಿದಂತೆ ಅಧಿಕಾರಗಳು ಆಶಾ,ಅಂಗನವಾಡಿ ಕಾರ್ಯಕರ್ತರು, ಮೇಲ್ವಿಚಾರಕರು, ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು.
== ಬಾಕ್ಸ್==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net