

ಬಾಗಲಕೋಟೆ: ನಗುತಾ ನಗುತಾ ಕಚೇರಿ ಕೆಲಸ ಪ್ರಾರಂಭಿಸಿ ದಿನವಿಡಿ ಲವಲವಿಕೆಯಿಂದ ದಿನಾ ಪೂರ್ಣಗೊಳಿಸಬೇಕು ಎಂದು ವಿಜಯಪುರದ ಚಾಣಾಕ್ಯ ಅಕಾಡೆಮಿ ಮುಖ್ಯಸ್ಥ ಎನ್.ಎಂ.ಬಿರಾದಾರ ಹೇಳಿದರು.
ನವನಗರ ಜಿ¯್ಲÁ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಖಜಾನೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಒಬ್ಬ ಸರ್ಕಾರಿ ನೌಕರನ ಯಶಸ್ಸು ಆತನ ನಗುವಿನಲ್ಲಿದೆ. ನೌಕರ ನಗುತಾ ನಗುತಾ ಕಚೇರಿ ಕಾರ್ಯವನ್ನು ಪ್ರಾರಂಭಿಸಿದರೆ ಇಡೀ ದಿನದ ಕಾರ್ಯ ಸಂತಸದಿAದ ಮುಗಿಯುತ್ತದೆ ಎಂದರು.
ಉಪನ್ಯಾಸಕ ಎಸ್.ಎಚ್.ಸಾಗರ ಒತ್ತಡದ ಬದುಕಿನಲ್ಲಿ ಕಾರ್ಯ ನಿರ್ವಹಣೆ ಮಾಡುವದು ಹೇಗೆ ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಂ. ಎಂ. ಸಿಂಧೂರ ಉದ್ಘಾಟಿಸಿದರು. ಎಸ್.ಬಿ.ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮುಖ್ಯಲೆಕ್ಕಾಽಕಾರಿ ಸಿದ್ದರಾಮೇಶ್ವರ ಉಕ್ಕಲಿ, ಎಸ್.ವೈ. ಚಿಕ್ಕನಗೌಡರ, ಶಿವನಗೌಡ ಎಸ್.ಬಿರಾದಾರ, ಎಂ. ಆರ್.ಕುಲಕರ್ಣಿ ಉಪಸ್ಥಿತರಿದ್ದರು. ಶ್ರೀಶೈಲ ಕುಳ್ಳಲಿ, ವಾಸುದೇವ ಹೂವನ್ನವರ ನಿರೂಪಿಸಿದರು.