ಕೆಎಲ್‌ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

20Anand2
Published on

ಬೆಳಗಾವಿ: ನಗರದ ಕೆಎಲ್‌ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಂಗಳೂರು ಎಸ್‌ಡಿಎಂ ಲಾ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಲೆಕ್ಸ್ ಅಲ್ಟಿಮಾ ರಾಷ್ಟ್ರೀಯಮಟ್ಟದ ಲಾ ೆಸ್ಟ್‌ನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನ ಗೆದ್ದುಕೊಂಡಿದ್ದಾರೆ.

ಅತ್ಯುತ್ತಮ ಜಾಮೀನು ಅರ್ಜಿ ಸ್ಪರ್ಧೆಯಲ್ಲಿ ವೃಷಭ್ ಪಾಟೀಲ ವಿಜೇತರಾಗಿದ್ದು, ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಚೇತನಾ ಪಾಟೀಲ್ ಸೆಮಿೈನಲ್ ತಲುಪಿದ್ದಾರೆ. ಕ್ವಿಜ್ ಸ್ಪರ್ಧೆಯ ೈನಲ್ ಹಂತಕ್ಕೆ ಅಮೋಘ ಸಾನಿಕೋಪ ತಲುಪಿದ್ದಾರೆ. ರಾಜ್ ಶಾ ವಾದ-ವಿವಾದ, ಮೂಟ್ ಕೋರ್ಟ್ ಹಾಗೂ ಕ್ವಿಜ್ ಸ್ಪರ್ಧೆಗಳಲ್ಲಿ ಜಯಶಾಲಿಯಾಗಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಪ್ರಾಚಾರ್ಯ ಡಾ. ಎ.ಎಚ್. ಹವಾಲ್ದಾರ್, ಮೂಟ್ ಕೋರ್ಟ್ ವಿಭಾಗದ ಸಂಯೋಜಕಿ ಪ್ರೊ. ಅಶ್ವಿನಿ ಪರಬ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net