

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿ ಶ್ರೀ ಬಿಳಿಕಲ್ಲು ಲಕ್ಷ್ಮೀ ರಂಗನಾಥಸ್ವಾಮಿ ರಥೋತ್ಸವ ಶನಿವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಶ್ರೀ ರಂಗನಾಥ ಸ್ವಾಮಿ, ಶ್ರೀ ಕೆಂಚರಾಯ ಸ್ವಾಮಿ ಮೂಲವಿಗ್ರಹಗಳನ್ನು ಪುಷ್ಪಗಳು, ಏಲಕ್ಕಿ ಹಾರದಿಂದ ಅಲಂಕರಿಸಲಾಗಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಯಾಗಶಾಲೆಯಲ್ಲಿ ಹೋಮ-ಹವನಗಳು ನಡೆದವು. ಪೂಜಾ ಕೈಂಕರ್ಯಗಳನ್ನು ನಡೆಸಿದ ಬಳಿಕ ರಥದ ಮೇಲೆ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಕದಲಿ ಛೇದನ ಮಾಡಲಾಯಿತು. ರಥೋತ್ಸವದ ವೇಳೆ ಆಗಸದಲ್ಲಿ ಗರುಡ ರಥದ ಸುತ್ತು ಹಾಕಿದ ನಂತರ ರಥವನ್ನು ಎಳೆಯಲಾಯಿತು.
ನೂತನ ವಧು- ವರರು ರಥದ ಕಳಸಕ್ಕೆ ಬಾಳೆಹಣ್ಣು, ಜವನ, ಏಲಕ್ಕಿ, ಮೆಣಸು ಎಸೆದು ಭಕ್ತಿ ಸಮರ್ಪಿಸಿದರು. ಬಳಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರಿಗೆ ಪಾನಕ, ಫಲಹಾರ, ಮಜ್ಜಿಗೆ ವಿತರಿಸಲಾಯಿತು.