

ಬಾಗಲಕೋಟೆ: ರಾಜ್ಯ ಸರ್ಕಾರ ಒಂದುವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಬರೀ ಭ್ರಷ್ಟಾಚಾರ ನಡೆಸಿ, ಹಗರಣಗಳಲ್ಲಿ ಸಿಲುಕಿದೆ. ಪ್ರತಿನಿತ್ಯ ಲಂಚಕ್ಕಾಗಿ, ಕಮಿಷನ್‌ಗಾಗಿ ಅಽಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಅನೇಕ ಅಽಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಗುತ್ತಿಗೆದಾರರಿಗೆ ಶೇ. ೬೦ ಕಮಿಷನ್ ಕೇಳುತ್ತಿದ್ದಾರೆಂದು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ವತಃ ಸಿದ್ದರಾಮಯ್ಯ ಅವರ ಕುಟುಂಬ ಮುಡಾ ಹಗರಣದಲ್ಲಿ ಸಿಲುಕಿಕೊಂಡು, ಒದ್ದಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಸರ್ಕಾರ ಅಽಕಾರದಲ್ಲಿ ಇರಲು ನೈತಿಕತೆ ಕಳೆದುಕೊಂಡಿದೆ, ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಈಗ ನಾಟಕೀಯವಾಗಿ ಕೆಲವನ್ನು ಬಂಽಸಿದ್ದಾರೆ. ವಾರಗಟ್ಟಲೆ ಬಿಟ್ಟು, ಎಲ್ಲ ಸಾಕ್ಷಿಗಳನ್ನು ನಾಶ ಮಾಡಲು ಅವಕಾಶ ಕೊಟ್ಟಿದ್ದನ್ನು ಖಂಡಿಸುತ್ತೇವೆ. ಘಟನೆಯಲ್ಲಿ ಯಾರೆಲ್ಲ ಭಾಗಿ ಆಗಿದ್ದಾರೆ ಅವರೆಲ್ಲರನ್ನು ಬಂಽಸಬೇಕು ಎಂದು ಒತ್ತಾಯ ಮಾಡಿದರು.
ರಾಜ್ಯದಲ್ಲಿ ನಡೆದಿರುವ ವಾಲ್ಮೀಕಿ ನಿಗಮ, ಅಂಬೇಡ್ಕರ್ ನಿಗಮದ ಹಗರಣ ಸೇರಿ ಹತ್ತು ಹಲವು ಹಗರಣದಲ್ಲಿ ಸರ್ಕಾರ ಸಿಕ್ಕುಹಾಕಿಕೊಂಡಿದೆ. ಗುತ್ತಿಗೆದಾರರ ಸಂಘದವರು ತಮಗೆ ಬಿಲ್ಲು ಕೊಟ್ಟಿಲ್ಲ. ಕಮಿಷನ್ ಒತ್ತಡ ಜಾಸ್ತಿ ಆಗಿದೆ. ಕಮಿಷನ್‌ಗಾಗಿ ೩೫ ಸಾವಿರ ಕೋಟಿ ರೂ.ಗಳ ಬಿಲ್ ಗಳನ್ನು ಪೆಂಡಿAಗ್ ಇಟ್ಟುಕೊಂಡಿದ್ದಾರೆ. ಇದರಿಂದ ನಾವು ಆತ್ಮಹತ್ಯೆ ಪ್ರಸಂಗ ಬಂದಿದೆ ಎಂದು ಸ್ವತಃ ಸಂಘದ ಅಧ್ಯಕ್ಷರು ಹೇಳುತ್ತಿದ್ದಾರೆ. ಡಾವಣಗೇರಿಯ ಗುತ್ತಿಗೆದಾರರ ಒಬ್ಬರು ಬಿಲ್ ಕೊಡಿ ಇಲ್ಲವೇ ದಯಾಮರಣ ಕೊಡಿ ಎಂದು ಮುಖ್ಯಮಂತ್ರಿಗಳಿಗೆ, ಸಂಬAಧಪಟ್ಟ ಅಽಕಾರಿಗಳಿಗೆ ಪತ್ರ ಬರೆದಿದ್ದಾನೆ. ಇಂತ ನಾಚಿಗ್ಗೇಡಿ ಸರ್ಕಾರವನ್ನು ರಾಜ್ಯದಲ್ಲಿ ಯಾವತ್ತು ಕೂಡ ನೋಡಿರಲಿಲ್ಲ. ಪ್ರತಿ ಸಲವೂ ಒಂದೊAದು ಗಿಮಿಕ್ ಮಾಡುತ್ತಾರೆ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.