ರ‍್ಯಾಡಂ ಥಾಟ್ಸ್ ಪುಸ್ತಕ ಬಿಡುಗಡೆ

1906Klb05
Published on

ಕಲಬುರಗಿ: ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಸಂಸ್ಥಾಪಕ ಪ್ರಾಚಾರ್ಯೆ ಪ್ರೊ.ವಿಜಯಲಕ್ಷಿ ಗುರುಸಿದ್ದಯ್ಯ ರಚಿಸಿರುವ ರ‍್ಯಾಡಂ ಥಾಟ್ಸ್ ಪುಸ್ತಕ ಶನಿವಾರ ಬಿಡುಗಡೆಗೊಂಡಿತು.
ಸಾಹಿತಿ, ನಿವೃತ್ತ ಪ್ರಾಚಾರ್ಯೆ ಡಾ.ಶೀಲಾ ಸಿದ್ರಾಮ ಪುಸ್ತಕ ಬಿಡುಗಡೆಗೊಳಿಸಿದರು. ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಡಾ.ಇಂದಿರಾ ಶೆಟಕಾರ್ ಪುಸ್ತಕ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ಅಧ್ಯಕ್ಷತೆ ವಹಿಸಿದ್ದರು.
ಸಾಕ್ಷಿ ಪ್ರಾರ್ಥಿಸಿದರು. ಡಾ.ಚಂದ್ರಕಲಾ ಪಾಟೀಲ್ ಸ್ವಾಗತಿಸಿದರು. ಡಾ.ಮಹೇಶ ಗಂವ್ಹಾರ್ ನಿರೂಪಿಸಿದರು. ಉಮಾ ರೇವೂರ್ ವಂದಿಸಿದರು. ಉಪ ಪ್ರಾಚಾರ್ಯರಾದ ಡಾ.ವೀಣಾ.ಎಚ್, ಉಮಾ ರೇವೂರ್ ಮತ್ತು ಡಾ.ಅಂಕಿತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net