ರೌಡಿಶೀಟರ್ ಕಿಶನ್ ಹತ್ಯೆ : ಐವರು ಆರೋಪಿಗಳ ಬಂಧನ

murder new
Published on

ಉಡುಪಿ: ಹಿರಿಯಡ್ಕ ಪೇಟೆಯಲ್ಲಿ ಶುಕ್ರವಾರ ಹಾಡುಹಾಗಲೇ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ರೋಪಿಗಳ ವಿವರವನ್ನು ಪೊಲೀಸರು ಇನ್ನಷ್ಟೇ ಬಹಿರಂಗ ಪಡಿಸಬೇಕಿದ್ದು, ಇಂದು ಮಧ್ಯಾಹ್ನ ನ್ಯಾಯಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಹಿರಿಯಡ್ಕ ಪೇಟೆ ಶ್ರೀ ವೀರಭದ್ರ ದೇವಸ್ಥಾನದ ಸಮೀಪ ರೌಡಿಶೀಟರ್ ಕಿಶನ್ ಹೆಗ್ಡೆ (35)ಯನ್ನು ತಲ್ವಾರಿನಿಂದ ಕಡಿದು ಹತ್ಯೆ ಮಾಡಿದ್ದರು. ಪ್ರಕರಣದ ತನಿಖೆಗಾಗಿ 4 ತನಿಖಾ ತಂಡ ರಚನೆ ಮಾಡಲಾಗಿತ್ತು.  

ದೇವಸ್ಥಾನಕ್ಕೆ ತೆರಳಿತ್ತಿದ್ದರು: ಕೊಲೆಯಾದ ರೌಡಿಶೀಟರ್ ಕಿಶನ್ ಹೆಗ್ಡೆ ಮತ್ತು ಜತೆಗಿದ್ದ ಮಂಗಳೂರು ಕಲ್ಲಗುಡ್ಡೆ ನಿವಾಸಿ ದಿವ್ಯರಾಜ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಎಂಬುವವರು ಮೂರು ಜನ ಉಡುಪಿಯಲ್ಲಿ ವಕೀಲರೊಂದಿಗೆ ಮಾತುಕತೆ ನಡೆಸಿ ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನಕ್ಕೆ ತೆರಳಿದ್ದರು. ಕಾರಿನಿಂದ ಇಳಿದು ದೇವಸ್ಥಾನಕ್ಕೆ ತೆರಳಬೇಕು ಎನ್ನುವಷ್ಟರಲ್ಲಿ ಮನೋಜ್ ಕೋಡಿಕೆರೆ ಮತ್ತವನ ತಂಡ ತಲ್ವಾರಿನಿಂದ ಕೃತ್ಯ ಎಸಗಿದ್ದಾರೆ. ಮನೋಜ್ ಮತ್ತು ಕಿಶನ್ ನಡುವಿನ ಹಣಕಾಸು ವೈಮನಸ್ಸಿನಿಂದ ಘಟನೆ ನಡೆದಿದೆ ಎಂದು ದಿವ್ಯರಾಜ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net