More

    ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಲಿದ್ದಾರೆ. ಕರೊನಾ ವೈರಸ್ ಸೋಂಕಿನ ಕಾರಣ ಈ ವರ್ಷ ಆನ್​ಲೈನ್ ಶೃಂಗ ನಡೆಯುತ್ತಿದೆ. ಈ ಸಭೆಯಲ್ಲಿ ಜಗತ್ತಿನ ಬಹುತೇಕ ನಾಯಕರು ಪ್ರೀರೆಕಾರ್ಡೆಡ್ ವಿಡಿಯೋ ಸಂದೇಶಗಳನ್ನೆ ಪ್ರಸಾರ ಮಾಡಿದ್ದಾರೆ. ಪ್ರಧಾನಿ ಮೋದಿಯವರೂ ಇದೇ ಮಾರ್ಗವನ್ನು ಅನುಸರಿಸುತ್ತಿದ್ದು, ಅವರ ಭಾಷಣ ಭಾರತೀಯ ಕಾಲಮಾನ ಸಂಜೆ 6.30ಕ್ಕೆ (ನ್ಯೂಯಾರ್ಕ್ ಕಾಲಮಾನ ಬೆಳಗ್ಗೆ 9ಕ್ಕೆ) ಪ್ರಸಾರವಾಗಲಿದೆ.

    ವಿಶ್ವಸಂಸ್ಥೆಯ 75ನೇ ವರ್ಷದ ಸಭೆ ನಡೆಯುತ್ತಿದ್ದು, ಭಾರತ ಕೆಲವೊಂದು ಆದ್ಯತೆಯ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾಗಿದೆ. ಮೂಲಗಳ ಪ್ರಕಾರ, ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರವನ್ನು ತೀವ್ರಗೊಳಿಸುವುದಕ್ಕೆ ಉತ್ತೇಜನ ನೀಡುವುದು. ಇದಕ್ಕಾಗಿ ಉಗ್ರ ಸಂಘಟನೆಗಳು ಮತ್ತು ಉಗ್ರರು, ಅವರ ಹಿತೈಷಿಗಳ ಪಟ್ಟಿ ಮಾಡಿ ನಿರ್ಬಂಧವೂ ಸೇರಿ ವಿವಿಧ ಕ್ರಮಗಳನ್ನು ಜಾರಿಗೊಳಿಸುವುದನ್ನು ಪ್ರತಿಪಾದಿಸಲಿದೆ.

    ಇದನ್ನೂ ಓದಿ: ಕೆಲವೊಮ್ಮೆ ಸಿದ್ದರಾಮಯ್ಯಗೆ ಕಿವಿ ಕೇಳುವುದಿಲ್ಲ: ಯಾಕೆಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ ನೋಡಿ

    ವಿಶ್ವಸಂಸ್ಥೆಯಲ್ಲಿ ಶಾಂತಿಪಾಲನಾ ಯೋಜನೆಯ ಅತಿದೊಡ್ಡ ಪಾಲುದಾರ ರಾಷ್ಟ್ರವಾಗಿ ಭಾರತ, ಈ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರನಿರ್ವಹಿಸುವುದಕ್ಕೆ ಉತ್ಸುಕವಾಗಿದೆ. ಕೋವಿಡ್ 19 ಮತ್ತು ಅದರ ತಡೆ, ನಿಯಂತ್ರಣ ಕ್ರಮಗಳ ವಿಚಾರವನ್ನೂ ಭಾರತ ಪ್ರಸ್ತಾಪಿಸಲಿದೆ. ಜಾಗತಿಕ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಖಾತರಿಪಡಿಸುವುದು, ಹೊಣೆಗಾರಿಕೆಯುತ ಪರಿಹಾರ ಕಂಡುಕೊಳ್ಳುವುದು, ಟೆಕ್ನಾಲಜಿ ಸೇರಿ ಎಲ್ಲ ಸಾಧ್ಯತೆಗಳನ್ನೂ ಬಳಸಿಕೊಳ್ಳುವುದು ಇತ್ಯಾದಿಗಳನ್ನು ಆದ್ಯತೆಯಾಗಿ ತೆಗೆದುಕೊಳ್ಳುವುದನ್ನು ಭಾರತ ಪ್ರತಿಪಾದಿಸಲಿದೆ. (ಏಜೆನ್ಸೀಸ್)

    ಟೆರರಿಸಂ, ರಹಸ್ಯ ಪರಮಾಣು ವ್ಯಾಪಾರವಷ್ಟೇ 70 ವರ್ಷಗಳಲ್ಲಿ ಪಾಕ್​ನ ಏಕೈಕ ಹೆಗ್ಗಳಿಕೆ: ವಿಶ್ವಸಂಸ್ಥೆಯಲ್ಲಿ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts