More

    ವಿಶ್ವಸಂಸ್ಥೆಯಲ್ಲೂ ‘ಕಾಂತಾರ’ ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ

    ಬೆಂಗಳೂರು: ಜಗತ್ತಿನಾದ್ಯಂತ ಸದ್ದು ಮಾಡಿದ್ದ ಕನ್ನಡದ ಸಿನಿಮಾ ಕಾಂತಾರ ಇದೀಗ ವಿಶ್ವಸಂಸ್ಥೆಯಲ್ಲೂ ತನ್ನ ಹವಾ ತೋರಿದ್ದು, ಅಲ್ಲಿ ವಿಶೇಷ ಪ್ರದರ್ಶನವನ್ನೂ ಕಂಡಿದೆ. ಅದರಲ್ಲೂ ಈ ಸಿನಿಮಾ ನಿರ್ದೇಶಕ-ನಟ ರಿಷಬ್ ಶೆಟ್ಟಿ ಭಾರತದ ಏಕೋಪಾಸ್ ಪ್ರತಿನಿಧಿಯಾಗಿ ಯುನೈಟೆಡ್ ನೇಷನ್ಸ್ ಹ್ಯೂಮನ್ ರೈಟ್ಸ್​ ಕೌನ್ಸಿಲ್​(ಯುಎನ್​ಎಚ್​ಆರ್​​ಸಿ)ನಲ್ಲಿ ಕನ್ನಡದಲ್ಲೇ ಮಾತನಾಡಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಪುಡಿರೌಡಿಯ ಪುಂಡಾಟ; ಕಾಂಡಿಮೆಂಟ್ಸ್ ಸ್ಟೋರ್​ ನಡೆಸುತ್ತಿದ್ದಾತನ ಮೇಲೆ ಹಲ್ಲೆ

    ಭಾರತದ ಇಕೋ ಫಾನ್​ ಪ್ರತಿನಿಧಿಯಾಗಿ ಯುಎನ್​ಎಚ್​​ಆರ್​​​ಸಿಯಲ್ಲಿ ಮೌಖಿಕ ಹೇಳಿಕೆಯನ್ನು ಸಲ್ಲಿಸಲು ಹೆಮ್ಮೆ ಪಡುತ್ತೇನೆ. ಅರಣ್ಯವಾಸಿಗಳ ಸಾಂಸ್ಕೃತಿಕ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಮತ್ತು ಕಾಂತಾರದಲ್ಲಿ ಅರಣ್ಯಗಳ ಸಂರಕ್ಷಣೆಯ ಮಹತ್ವವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದಾರೆ.

    ವಿಶ್ವಸಂಸ್ಥೆಯಲ್ಲೂ 'ಕಾಂತಾರ' ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ

    ಪರಿಸರದ ಮಹತ್ವ, ಅದರೊಂದಿಗೆ ಜನರ ನಂಟು, ನಂಬಿಕೆ, ಆಚರಣೆಗಳನ್ನು ಕಾಂತಾರದಲ್ಲಿ ಹೇಗೆ ತೋರಿಸಲಾಗಿದೆ ಎಂಬ ಕುರಿತು ಸಿನಿಮಾ ಪ್ರದರ್ಶಿಸುವ ಮೂಲಕ ಅನಾವರಣಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

    ವಿಶ್ವಸಂಸ್ಥೆಯಲ್ಲೂ 'ಕಾಂತಾರ' ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ

    ಹೆಮ್ಮೆಯ ಕನ್ನಡಿಗನೊಬ್ಬ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಕನ್ನಡದಲ್ಲಿ ಮಾತನಾಡಿದ್ದು ನಿಜಕ್ಕೂ ಅದ್ಭುತ. ಅಭಿನಂದನೆಗಳು, ನಿಮ್ಮ ಕನ್ನಡಪ್ರೇಮಕ್ಕೆ ನನ್ನ ಹೃದಯಾಂತರಾಳದಿಂದ ಗೌರವವನ್ನು ಅರ್ಪಿಸುತ್ತೇನೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ರಿಷಬ್​ ಶೆಟ್ಟಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

    ವಿಶ್ವಸಂಸ್ಥೆಯಲ್ಲೂ 'ಕಾಂತಾರ' ಹವಾ; ಭಾರತದ ಪ್ರತಿನಿಧಿಯಾಗಿ ಕನ್ನಡದಲ್ಲೇ ಮಾತನಾಡಿದ ರಿಷಬ್​ ಶೆಟ್ಟಿ
    ವಿಶ್ವಸಂಸ್ಥೆಯಲ್ಲಿ ರಿಷಬ್ ಮಾತನಾಡಿದ ವಿಷಯದ ಕುರಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts