

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರ ಮತ್ತು ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿ ರೌಡಿ ಶೀಟರ್‌ಗಳ ವಿರುದ್ಧ ಜನರು ನೀಡಿದ ಕೇಸ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಹೈದರಾಬಾದ ಕರ್ನಾಟಕ ಭೋವಿ ಜನಸೇವಾ ಸಂಘದ ಅಧ್ಯP್ಷÀ ಭಗವಾನ ಭೋವಿ ದೂರಿದರು.
ಠಾಣೆಗಳಿಗೆ ಜನರು ದೂರು ಕೊಡಲು ಹೋದರೆ ಸಚಿವರು, ಶಾಸಕರ ಕುಮ್ಮಕ್ಕಿನಿಂದಾಗಿ ಪೊಲೀಸರು ಕೇಸ್ ದಾಖಲಿಸಿಕೊಳ್ಳುತ್ತಿಲ್ಲ. ಅಲ್ಲದೆ ಸ್ವೀಕೃತಿ ಪತ್ರವನ್ನು ನೀಡುತ್ತಿಲ್ಲ ಇದರಿಂದಾಗಿ ರೌಡಿಗಳ ಉಪಟಳ ಹೆಚ್ಚಿದೆ. ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೌಡಿಗಳು ತೊಂದರೆ ಅನುಭವಿಸಿದವರು ಪೊಲೀಸರ ಬಳಿ ಹೋದರೆ ಸ್ಪಂದಿಸುತ್ತಿಲ್ಲ. ಎಫ್‌ಐಆರ್ ದಾಖಲು ಮಾಡುತ್ತಿಲ್ಲ. ಕೂಡಲೇ ಈ ವ್ಯವಸ್ಥೆ ಸರಿಡಿಸಬೇಕು. ಅಲ್ಲದೆ ಜನರು ದೂರು ನೀಡಲು ಎಲ್ಲ ಕಡೆಗಳಲಿ ಕೌಂಟರ್‌ಗಳನ್ನು ಆರಂಭಿಸಬೇಕು. ಅಲ್ಲಿಂದ ಅವನ್ನು ಠಾಣೆಗೆ ವರ್ಗಾಯಿಸುವಂತೆ ಮಾಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆದು ಕೋರಿದಾಗಿ ತಿಳಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ರೌಡಿಗಳಿದ್ದಾರೆ. ಹೀಗಾಗಿ ದೂರು ದಾಖಲಿಸಿಕೊಳ್ಳುತ್ತಿಲ್ಲ. ಜಿ¯್ಲÁ ಉಸ್ತುವಾರಿ ಸಚಿವರು ಎಲ್ಲ ಪೊಲೀಸರಿಗೆ ಕೇಸ್ ದಾಖಲಿಸಿಕೊಳ್ಳಲು ಸೂಚನೆ ನೀಡಬೇಕು.ನಿರ್ಲP್ಷÀ್ಯ ಮಾಡಿದರೆ ಸಚಿವರ ಮನೆ ಅಥವಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದತ್ತು ಭೋವಿ,ಭೀಮಶಾ ಪಟ್ಟೆದಾರ,ದೇವಪ್ಪ ಜಮಾದಾರ,ಸುಭಾಷ ಭೋವಿ,ಅಣ್ಣಾರಾವ ವೈಜಾಪುರ, ತುಕಾರಾಮ ಭೋವಿ ಇದ್ದರು.