

ಬಾಗಲಕೋಟೆ: ಶಾಸಕ ಚರಂತಿಮಠ ಅವರೇ ನೀವು ಗಾಬರಿ ಆಗಬೇಕಿಲ್ಲ. ಮುಳುಗಡೆ ಪ್ರದೇಶದ ಅಭಿವೃದ್ದಿಗೆ ೨ ಸಾವಿರ ಕೋಟಿ ತಂದೇನಿ, ರಸ್ತೆ ಅಭಿವೃದ್ದಿ ಮಾಡಿಸೇನಿ, ಅದು, ಇದು ಇವೆಲ್ಲ ಬೇಡ. ಜೈ ಹಿಂದೂ ಅನ್ನಿರಿ ಚುನಾವಣೆಯಲ್ಲಿ ಗೆಲ್ಲುತ್ತೀರಿ.
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಚುನಾವಣೆ ಗೆಲುವಿಗೆ ಟಿಪ್ಸ ಹೇಳಿದ್ದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ.
ಭಾನುವಾರ ರಾತ್ರಿ ಕಿಲ್ಲಾ ಓಣಿಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಲ್ಲಿ ಚರಂತಿಮಠರಿಗೆ ಈ ಸಲಹೆ ನೀಡಿದರು.
ಚರಂತಿಮಠ ಅವರೇ ನೀವು ಖಡಕ ಆಗಬೇಕು. ಅಭಿವೃದ್ದಿ ಜೊತೆಗೆ ಹಿಂದೂ ಎನ್ನಿರಿ. ಆಗ ನಿಮ್ಮ ವಿರುದ್ದ ಎಷ್ಟು ಮಕ್ಕಳು ಪ್ರೆಸ ಮೀಟ್ ಮಾಡಿದರೂ ಏನೂ ಆಗಲ್ಲ. ನಮ್ಮ ಜನರಿಗೆ ಒಂದು ಕೆಲಸ ಕಡಿಮೆ ಮಾಡಿರಿ. ಹಿಂದುತ್ವ ಉಳಿಸಿ ಎಂದು ಹೇಳಿ. ರೋಡ ಇಲ್ದಿದ್ದರೂ ನಡೆಯುತ್ತದೆ. ಜನ ಹಂಗ ಹಿಂಗ ಮಾಡಿ ಅಡ್ಡಾಡುತ್ತಾರೆ. ಆದರೆ, ಹಿಂದೂ, ಹಿಂದುತ್ವ ಉಳಿದರೆ ನಾವು ಉಳಿಯುತ್ತೇವೆ ಎಂದರು.
ಈ ಭಾಗದಲ್ಲಿ ಲವ್ ಜಿಹಾದ ಭಾಳ ಆಗುತ್ತವೆ ಅಂತಿದ್ದಾರೆ. ಈ ಬಗ್ಗೆ ಲಕ್ಷ್ಯ ಇರಲಿ. ನೀವು ಸ್ಟ್ರಾಂಗ ಆಗಿರಿ. ನಮ್ಮಲ್ಲಿ ಒಬ್ಬ ಹಿಂದೂ ಹುಡುಗ ಮದುವೆಯಾಗಿ ಬಂದ. ಅವನಿಗೆ ೨ ಲಕ್ಷ ರೂ. ಕೊಟ್ಟಿದ್ದೇನೆ. ಸಂಸಾರ ಮಾಡಿಕೊಂಡು ಹೋಗು ಎಂದಿದ್ದೇನೆ. ಇನ್ನೂ ಬೇಕಿದ್ದರೆ ಕೇಳು, ಒಟ್ಟು ಹಿಂದೂಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಯತ್ನಾಳ ಹೇಳಿದರು.