ರೋಟರಿ ಸೇವಾಕಾರ್ಯಗಳಿಗೆ ಜನರ ಪ್ರಶಂಸೆ

03.ಪಿ ವೈ ಪಿ 01
Published on

ಪಿರಿಯಾಪಟ್ಟಣ: ರೋಟರಿಯ ಸಾಮಾಜಿಕ ಕಾರ್ಯಕ್ರಮಗಳು ಜನಮಾನಸದಲ್ಲಿ ಚಿರಪರಿಚಿತವಾಗಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ರೋಟರಿ ಜಿಲ್ಲೆ 3181ರ ನಿಯೋಜಿತ ಪ್ರಾಂತಪಾಲ ಸತೀಶ್ ಬೋಳಾರ್ ತಿಳಿಸಿದರು.

ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಪಸರಿಸಿದ್ದು ಶಿಕ್ಷಣ, ಆರೋಗ್ಯ, ಮೂಲಸೌಲಭ್ಯಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿದೆ. ಯಾವುದೇ ಪ್ರತಿಫಲ ನಿರೀಕ್ಷಿಸದೆ ಸೇವೆ ಮಾಡುವುದು ರೋಟರಿ ಧ್ಯೇಯವಾಗಿದೆ. ರೋಟರಿ ಸಂಸ್ಥೆ ಕೈಗೊಂಡ ಸಾಮಾಜಿಕ ಕಾಳಜಿಯಿಂದ ಬಹುತೇಕ ರಾಷ್ಟ್ರಗಳಲ್ಲಿ ಪೋಲಿಯೋ ಸಂಪೂರ್ಣವಾಗಿ ಅಂತ್ಯ ಕಂಡಿದೆ ಎಂದರು.

ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ರೋಟರಿ ಸೇವಾ ಸಂಸ್ಥೆ ತನ್ನ ಸೇವಾ ಚಟುವಟಿಕೆಗಳಿಂದ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಯಾವುದೇ ಪ್ರತಿಫಲ ನಿರೀಕ್ಷಿಸದೆ ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಮಾಡುವುದರಿಂದ ಭಗವಂತನ ಕೃಪೆ ಇರಲಿದೆ ಎಂದರು.

ರೋಟರಿ ವಲಯ 06ರ ಸಹಾಯಕ ಪ್ರಾಂತಪಾಲ ಟಿ.ಜೆ.ರಾಜೇಗೌಡ, ವಲಯ ಸೇನಾನಿ ಕೆ.ರಮೇಶ್, ನಿಕಟ ಪೂರ್ವ ಅಧ್ಯಕ್ಷ ಜೆ.ಎಸ್.ನಾಗರಾಜ್, ನೂತನ ಅಧ್ಯಕ್ಷ ಎಂ.ಬಿ.ಸಂಪತ್ ಮಾತನಾಡಿದರು. ಮಕ್ಕಳ ತಜ್ಞ ಡಾ.ಶಿವಪ್ರಕಾಶ್, ಪಶು ಚಿಕಿತ್ಸಕ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಆರು ಜನ ಹೊಸ ಸದಸ್ಯರು ಸಂಸ್ಥೆಗೆ ಸೇರ್ಪಡೆಗೊಂಡರು.

ನಿಕಟಪೂರ್ವ ಕಾರ್ಯದರ್ಶಿ ಬಿ.ಎಸ್.ಪ್ರಸನ್ನ ಕುಮಾರ್, ನೂತನ ಕಾರ್ಯದರ್ಶಿ ಬಿ.ಎಸ್.ಸತೀಶ್ ಆರಾಧ್ಯ, ವಲಯ 6 ರ ಸಹಾಯಕ ಪ್ರಾಂತಪಾಲ ಧಿಲನ್ ಚೆಂಗಪ್ಪ, ಉಲ್ಲಾಸ್ ಕೃಷ್ಣ, ಪದಾಧಿಕಾರಿಗಳಾದ ಸಿ.ಎನ್.ವಿಜಯ್, ಬಿ.ಆರ್.ಗಣೇಶ್, ಎಸ್.ರಮೇಶ್, ಎನ್.ಕರುಣಾಕರ್, ಟಿ.ಎಸ್.ಹರೀಶ್, ಕೆ.ವಿ.ಶಿಲ್ಪಾ, ವಿ.ಎಸ್.ರಮೇಶ್, ಪ್ರೀತಿ ಅರಸ್, ಎಚ್.ಆರ್.ರಮ್ಯಾ, ಬಿ.ವಿ.ಅನಿತಾ, ಪಿ.ಎನ್.ಸಂತೋಷ್, ಪರಮೇಶ್, ನಾಗರಾಜು, ಡಿ.ರಮೇಶ್, ಕೆ.ಆರ್.ಕೆಂಪಣ್ಣ, ಸುನೀಲ್ ಕುಮಾರ್, ಬಿ.ರವಿಚಂದ್ರ, ಡಿ.ಎ.ನಾಗೇಂದ್ರ, ಕೆ.ಬಿ.ಮಹೇಶ್, ಸತೀಶ್, ಕಾಳೇಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net