ರೋಟರಿ ಸಂಸ್ಥೆಗೆ ಸಾಮಾಜಿಕ ಬದ್ಧತೆ

bkt-18-3
ಬಾಗಲಕೋಟೆ ನಗರದ ರೋಟರಿ ಸರ್ಕಲ್ ಬಳಿ ನಿರ್ಮಿಸಿದ ರೋಟರಿ ಉದ್ಯಾನವನ್ನು ಶಾಸಕ ಎಚ್.ವೈ. ಮೇಟಿ ಉದ್ಘಾಟಿಸಿದರು. ರೋಟರಿ ಕ್ಲಬ್‌ನ ಡಾ.ಗಿರೀಶ ಮಸೂರಕರ, ಕಾರ್ಯದರ್ಶಿ ಮಲ್ಲಿನಾಥ ಹಿರೇಮಠ, ಖಜಾಂಚಿ ಮಹಾದೇವ ದಂದರಗಿ, ಪಿಆರ್‌ಒ ಶಿವಕುಮಾರ ನಂದಿಕೋಲಮಠ ಇತರರು ಇದ್ದರು.
Published on

ಬಾಗಲಕೋಟೆ: ರೋಟರಿ ಕ್ಲಬ್ ಸಾಮಾಜಿಕ ಬದ್ಧತೆಯೊಂದಿಗೆ ಹಲವಾರು ಸೇವಾ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ಈ ಸಂಸ್ಥೆ ನಡೆಸುವ ಸಾಮಾಜಿಕ ಸೇವೆಗೆ ಎಲ್ಲ ರೀತಿಯಿಂದ ಸಹಕಾರ ನೀಡಲಾಗುವುದು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು.

ನಗರದ ದಡ್ಡೇನವರ ಕ್ರಾಸ್ (ರೋಟರಿ ಸರ್ಕಲ್) ಬಳಿ ರೋಟರಿ ಕ್ಲಬ್‌ನಿಂದ ನಿರ್ಮಿಸಿದ ರೋಟರಿ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಕ್ಲಬ್‌ನಿಂದ ನಿರ್ಮಿಸಿದ ಸುಂದರ ಉದ್ಯಾನವನ, ಹಳೆಯ ನಗರ, ವಿದ್ಯಾಗಿರಿ ಹಾಗೂ ಮುಂದೆ ನಿರ್ಮಾಣಗೊಳ್ಳಲಿರುವ ೩ನೇ ಯೂನಿಟ್ ಜನರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ನವನಗರ, ಹಳೆಯ ಬಾಗಲಕೋಟೆ ಹಾಗೂ ವಿದ್ಯಾಗಿರಿ ಜನರಿಗೆ ಇದು ಮಧ್ಯದ ಜಾಗವಾಗಿದ್ದು, ಸಾರ್ವಜನಿಕರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್‌ನ ಮಲ್ಲಿಕಾರ್ಜುನ ಹದ್ಲಿ ಮಾತನಾಡಿ, ಸಂಸ್ಥೆಯಿAದ ಸುಂದರ ಉದ್ಯಾನವನ ನಿರ್ಮಾಣಕ್ಕೆ ಶಾಸಕರ ಸಹಕಾರವೂ ಇದೆ. ಕೇವಲ ೮ ದಿನಗಳಲ್ಲಿ ಕೊಳವೆ ಬಾವಿ ತೋಡಿಸಿ, ಅದಕ್ಕೆ ವಿದ್ಯುತ್ ಮೋಟಾರ್ ಕೂಡ ಅಳವಡಿಸಿದ್ದಾರೆ. ಇದರಿಂದ ಉದ್ಯಾನವನಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯೂ ಬಾರದು. ಈ ಸಹಕಾರ ನೀಡಿದ ಶಾಸಕರಿಗೆ, ರೋಟರಿ ಕ್ಲಬ್‌ನಿಂದ ಅಭಿನಂದಿಸುವುದಾಗಿ ಹೇಳಿದರು.

ರೋಟರಿ ಕ್ಲಬ್‌ನ ಡಾ.ಗಿರೀಶ ಮಸೂರಕರ, ಕಾರ್ಯದರ್ಶಿ ಮಲ್ಲಿನಾಥ ಹಿರೇಮಠ, ಖಜಾಂಚಿ ಮಹಾದೇವ ದಂದರಗಿ, ಪಿಆರ್‌ಒ ಶಿವಕುಮಾರ ನಂದಿಕೋಲಮಠ, ಮುಖಂಡರಾದ ಮುಕುಂದ ಕುಲಕರ್ಣಿ, ರವೀಂದ್ರ ಮಾನೆ, ವಿಶ್ವನಾಥ ವೈಜಾಪುರ, ನಾಗರಾಜ ಹದ್ಲಿ, ಪ್ರಕಾಶ, ಬಸವರಾಜ ಶಿವಪೂಜಿ, ಪರಶುರಾಮ ಮುಳಗುಂದ, ರವಿ ಪಾಟೀಲ, ತುಕಾರಾಮ, ಚಂದ್ರಶೇಖರ ಕಟಗೇರಿ ಉಪಸ್ಥಿತರಿದ್ದರು. ರೋಟರಿ ಕ್ಲಬ್‌ನ ಅಧ್ಯಕ್ಷ ಸಂತೋಷ ನಾವಲಗಿ ಸ್ವಾಗತಿಸಿದರು. ಪ್ರಲ್ಹಾದ ಹುಯಿಲಗೋಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net