

ಕೆ.ಎಂ.ದೊಡ್ಡಿ: ರೋಟರಿ ಸಂಸ್ಥೆ ವತಿಯಿಂದ ರೋಟರಿ ಹಳ್ಳಿಹಬ್ಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೋಟರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಚಾಲನೆ ದೊರೆಯಿತು.
ಭಾರತೀನಗರ ರೋಟರಿ ಸೆಂಟ್ರಲ್, ಬೆಂಗಳೂರಿನ ರೋಟರಿ ಸಂಸ್ಥೆಗಳಾದ ಸೌತ್ ಎಂಡ್, ಸ್ಪಂದನ, ಸೌತ್ ಪರೇಡ್ ಮತ್ತು ಉಳ್ಳಾಲ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಹಳ್ಳಿ ಹಬ್ಬ ಶಿರ್ಷಿಕೆಯಡೆ ರೋಟರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ರೋಟರಿ ಜಿಲ್ಲಾ ಪಾಲಕ ಸತೀಶ್ ಮಾಧವನ್, ಮಹದೇವಪ್ರಸಾದ್ ಚಾಲನೆ ನೀಡಿದರು.
ಜಿಲ್ಲಾ ಪಾಲಕ ಸತೀಶ್ ಮಾಧವನ್ ಮಾತನಾಡಿ, ರೋಟರಿ ಸಂಸ್ಥೆ ಹಲವು ದಶಕಗಳಿಂದ ಸಾಮಾಜಿಕ ಚಟುವಟಿಕೆ ಮಾಡುವ ಮೂಲಕ ಸಂಸ್ಥೆ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ರೋಟರಿ ಸಂಸ್ಥೆ ನಗರ ಪ್ರದೇಶಕ್ಕೆ ಮಾತ್ರ ಸಿಮೀತವಾಗದೆ ಹಳ್ಳಿಗರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುತ್ತ ಜನೋಪಯೋಗಿ ಕೆಲಸಗಳನ್ನು ಮಾಡುತ್ತ ಬರುತ್ತಿದೆ. ಅದರಲ್ಲಿ ಭಾರತೀನಗರ ರೋಟರಿ ಸೆಂಟ್ರಲ್ ಉತ್ತಮವಾಗಿ ಕಾರ್ಯನಿರ್ವಾಹಿಸುತ್ತ ಗ್ರಾಮೀಣ ಭಾಗದ ಜನತೆಗೆ ಮತ್ತು ರೈತರಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಪ್ರತಿ ತಿಂಗಳ ಮೊದಲ ವಾರದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಸಿ ಹಲವರಿಗೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸುತ್ತ ಬಡವರಿಗೆ ನೆರವಾಗಿದ್ದು, ಇಂತಹ ಮಹಾನ್ ಕೆಲಸಗಳು ನಿರಂತರವಾಗಿ ಮುಂದುವರಿಯಲಿ ಎಂದರು.
ರೋಟರಿ ಭಾರತೀನಗರ ಸೆಂಟ್ರಲ್‌ನ ಅಧ್ಯಕ್ಷ ಎಸ್.ಕೆ.ಶಶಿಕುಮಾರ್ ಮಾತನಾಡಿ, ರೋಟರಿ ಹಬ್ಬದ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ. ಬಡ ಮತ್ತು ಮದ್ಯಮ ವರ್ಗದ ಜನತೆ ಸೇರಿದಂತೆ ರೈತರಿಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಜನರಿಗೆ ನೆರವಾಗಲಿದ್ದೆವೆ ಎಂದರು.
ಮೆಣಸಗೆರೆಯ ಜ್ಞಾನ ಮುದ್ರಾ ವಿದ್ಯಾಮಂದಿರ ಸೇರಿದಂತೆ ಚಿಕ್ಕಅರಸಿನಕೆರೆ, ಭಾರತೀನಗರ, ಮಾರ್ಗನಹಳ್ಳಿ, ಮಾದರಹಳ್ಳಿ, ಕ್ಯಾತಘಟ್ಟ, ಕಾಡುಕೊತ್ತನಹಳ್ಳಿ, ಮಡೇನಹಳ್ಳಿ ಪ್ರೌಢಶಾಲೆಗಳಲ್ಲಿ ಶೌಚಗೃಹ ಶುದ್ಧಿ ಸಾಮಗ್ರಿ, ಸ್ಯಾನಿಟರಿ ಪ್ಯಾಡ್ ವಿತರಣೆ, ಹೆಣ್ಣು ಮಕ್ಕಳ ವೈಯಕ್ತಿಕ ಸ್ವಚ್ಛತೆ ಬಗ್ಗೆ ಮಾರ್ಗದರ್ಶನ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಜರುಗಿತು.
ಲೆಪ್ಟಿನೆಂಟ್ ಗೌರ್ರ್‌ನರ್ ಕೆ.ಕುಮಾರರಾಜು, ಸಹಾಯಕ ಗೌರ್ಯನರ್ ಎಂ.ಆರ್.ಮಧು, ಕಾರ್ಯದರ್ಶಿ ಕರಡಕೆಡರೆ ಮರಿಸ್ವಾಮಿ, ಬಿ.ವಿ.ಮಧುಸೂದನ್, ಡಾ.ಸೌಮ್ಯ ರಾಜೇಶ್, ಶಿವಮ್ಮ ಶಿವಕುಮಾರ್, ಶಿವರತ್ನಮ್ಮಣ್ಣಿ ಅರಸ್, ದೇವರಹಳ್ಳಿ ಶಿವರಾಮು, ಶಿವಲಿಂಗಯ್ಯ, ತೊರೆಚಾಕನಹಳ್ಳಿ ಕೆಂಪೇಗೌಡ, ನಂದೀಶ್, ಕೃಷ್ಣ, ಹಾಗಲಹಳ್ಳಿ ಶಿವಾನಂದ್, ಸೌತ್ ಎಂಡ್ ಅಧ್ಯಕ್ಷ ವಿಕ್ರಮ್ ರಾಜೇ ಅರಸ್, ಕಾರ್ಯದರ್ಶಿ ಸೌಮ್ಯಾ ಪ್ರಕಾಶ್ ಸನ್ನ, ರೋಟರಿ ಸ್ಪಂದನ ಅಧ್ಯಕ್ಷ ಕಿಶೋರ್, ಕಾರ್ಯದರ್ಶಿ ವಿಜಯ ಸಲಿಯಾನ, ರೋಟರಿ ಸೌತ್ ಪರೇಡ್ ಅಧ್ಯಕ್ಷ ರವಿA ಚಕ್ರವರ್ತಿ, ಕಾರ್ಯದರ್ಶಿ ಅರ್ಜುನ್, ಉಳ್ಳಾಲ ರೋಟರಿ ಅಧ್ಯಕ್ಷ ಕೆ.ಆರ್.ಸುರೇಂದ್ರ, ಕಾರ್ಯದರ್ಶಿ ಮಾಧವಿ ಶ್ರೀಕಾಂತ್ ಮತ್ತಿತರಿದ್ದರು.