ಪಾಂಡವಪುರ: ಪಟ್ಟಣದ ರೋಟರಿ ಎಜುಕೇಷನ್ ಟ್ರಸ್ಟ್‌ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಫಲಿತಾಂಶ ಬಂದಿದ್ದು, ತಾಲೂಕಿಗೆ 3ನೇ ಸ್ಥಾನ ಲಭಿಸಿದೆ.
ಬಿ.ವೈಷ್ಣವಿ 595 (ಶೇ.95.20), ಎಚ್.ಎಸ್.ಪಾವನಾ 590(ಶೇ.94.40), ಟಿ.ಎಸ್.ಸಂಜನಾ 577(ಶೇ.92.32), ಎಚ್.ಡಿ.ವಿಕಾಸ್‌ಗೌಡ 560(ಶೇ.89.60), ಅಖಿಲೇಷ್.ಬಿ.ಎಲ್.527 (ಶೇ.84.32), ಬಿ.ಕೆ.ಪ್ರಕೃತಿ 520 (ಶೇ.83.20), ಎಸ್.ಪುನೀತ್‌ಗೌಡ 517(ಶೇ.82.72), ಎನ್.ಎಸ್.ಕುಶಾಲ್‌ಗೌಡ 505(ಶೇ.80.80) ಹಾಗೂ ಎಚ್.ಕೆ.ಪ್ರವೀಣ್‌ಕುಮಾರ್ 502(ಶೇ.80.32) ಅಂಕ ಪಡೆದಿದ್ದಾರೆ. ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲಾಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.