ರೋಗಿ ಕರೆತಂದ ಕಾರು ಚಾಲಕ ಹೃದಯಾಘಾತಕ್ಕೆ ಬಲಿ !

df497eb7-0541-42a0-bc90-8f09167757ae
ಬಾಡಿಗೆ ಕಾರ
Published on

ಬಾಗಲಕೋಟೆ: ರೋಗಿ ಒಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಬಾಡಿಗೆ ಕಾರಿನ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆ ಬಳಿ ಸಂಭವಿಸಿದೆ.

ಶುಕ್ರರಾಜ್ ಸಂಕಣ್ಣವರ(೪೩) ಹೃದಯಾಘಾತದಿಂದ ಸಾವನ್ನಪ್ಪಿರುವ ಕಾರು ಚಾಲಕ. ಮೃತ ಚಾಲಕ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ಶುಕ್ರರಾಜ್ ಅವರು ರೋಗಿ ಒಬ್ಬರನ್ನು ಬಾಗಲಕೋಟೆ ನಗರದ ದಡ್ಡೇನವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ರೋಗಿಯನ್ನು ಆಸ್ಪತ್ರೆಗೆ ಬಿಡುವಾಗ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಆಗ ರೋಗಿ ಕಡೆಯವರು ಕಾರು ಚಲಾಯಿಸಿಕೊಂಡು ಹತ್ತಿರದಲ್ಲೆ ಇದ್ದ ಕೆರೂಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಎಮರ್ಜನ್ಸಿ ವಾರ್ಡ್ಗೆ ಹೋಗುತ್ತಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ರೋಗಿಯನ್ನು ಕರೆತಂದಿದ್ದ ಆಸ್ಪತ್ರೆಯಿಂದ ಕೆರೂಡಿ ಆಸ್ಪತ್ರೆಗೆ ಕರೆದುಕೊಂಡು ಬರಲು ಅಬ್ಬಬ್ಬಾ ಎಂದರೂ ಐದಾರು ನಿಮಿಷಗಳು ಆಗಿರಬೇಕು. ಅಷ್ಟರಲ್ಲೇ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net