ರೈತರು-ಪಿಎಸಿಸಿ ಬ್ಯಾಂಕ್ ಸಮರ ಇತ್ಯರ್ಥ

sahakara sangha
Published on

ಮೂಗೂರು: ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಹಣ ದುರುಪಯೋಗದ ಸಂಬಂಧ ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಅನಿಲ್‌ಕುಮಾರ್ ಹಾಗೂ ಸಂಘದ ಅಧ್ಯಕ್ಷ ಬಿ.ಜಿ.ನಾಗೇಂದ್ರ ಕುಮಾರ್ ಸಮ್ಮುಖದಲ್ಲಿ ಶುಕ್ರವಾರ ಸಂಘದ ಕಚೇರಿಯಲ್ಲಿ ಇತ್ಯರ್ಥಪಡಿಸಿ ನಂತರ ಸಂಘದ ಕಾರ್ಯ ಚಟುವಟಿಕೆಗೆ ಆಡಳಿತ ಮಂಡಳಿ ನಿರ್ದೇಶಕರು ಸಮ್ಮತಿ ಸೂಚಿಸಿದರು.

ಬಾಣಹಳ್ಳಿ ಗ್ರಾಮದ ಪಿಎಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಆಡಳಿತ ಮಂಡಳಿ ಹಾಗೂ ರೈತ ಮುಖಂಡರ ಸಭೆಯಲ್ಲಿ ರೈತರು, ಇತರರಿಗೆ ತೊಂದರೆಯಾಗದಂತೆ ರೈತರ ಹಣವನ್ನು ಬ್ಯಾಂಕ್‌ಗೆ ಸಂದಾಯ ಮಾಡಲು 3 ತಿಂಗಳ ಗಡುವು ನೀಡಿ ಎಂದಿನಂತೆ ಸಂಘದ ಕಾರ್ಯ ಚಟುವಟಿಕೆಯನ್ನು ಮುಂದುವರಿಸಲು ಗ್ರಾಮಸ್ಥರು ತಿಳಿಸಿದರು.

ಬಾಣಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ರೈತರು ಧರಣಿ ನಡೆಸಿದ್ದರು.

ಮುಖಂಡರಾದ ಮಾದೇಗೌಡ, ಸುಗಂಧರಾಜು, ಕಮರವಾಡಿ ಮಾಯಿ, ಪುರುಷೋತ್ತಮ, ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net