ರೈತರಿಗೆ ಆಧುನಿಕ ಕೃಷಿ ಪದ್ಧತಿ ಮಾಹಿತಿ

IMG-20250820-WA0020
Published on

ಬೇಲೂರು: ರೈತರ ಹಿತಾಸಕ್ತಿಗಾಗಿ ಆಧುನಿಕ ಕೃಷಿ ಪದ್ಧತಿ ಕಾರ್ಯಕ್ರಮವನ್ನು ಪಟ್ಟಣ ಸಮೀಪದ ರಾಯಪುರ ಗ್ರಾಮದಲ್ಲಿ ಬುಧವಾರ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿ ರೈತರಿಗೆ ಮಾಹಿತಿ ನೀಡಲಾಯಿತು.

ಕಾಯರ್ರ್ಕ್ರಮದಲ್ಲಿ ರೈತರಿಗೆ ಕೃಷಿಯಲ್ಲಿ ಅಳವಡಿಸಿಕೊಳ್ಳಬಹುದಾದ ನೂತನ ತಂತ್ರಜ್ಞಾನ, ಆಧುನಿಕ ಯಂತ್ರೋಪಕರಣಗಳ ಬಳಕೆ ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ಹೆಚ್ಚಿನ ಇಳುವರಿ, ಲಾಭ ಪಡೆಯುವ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ವಿಶೇಷವಾಗಿ, ಗದ್ದೆಗಳಲ್ಲಿ ಸೂಕ್ತ ಬಿತ್ತನೆ ವಿಧಾನದೊಂದಿಗೆ ನೀರಾವರಿ ತಂತ್ರಜ್ಞಾನ, ಸಮರ್ಪಕ ಗೊಬ್ಬರ ಬಳಕೆ, ರೋಗಕೀಟ ನಿಯಂತ್ರಣ ಮಾರ್ಗಗಳು ಭೂಮಿಯ ಫಲವತ್ತತೆ ಜತೆಗೆ ಯಾವ ಮಾದರಿ ಬೆಳೆ ಬೆಳೆಯಬೇಕು ಎಂಬುದನ್ನು ತಿಳಿಸಿಕೊಟ್ಟರು. ರೈತರು ಹೆಚ್ಚಿನ ಮಾಹಿತಿ ಪಡೆಯಲು ಕೃಷಿ ಇಲಾಖೆಯಲ್ಲಿನ ಮಾಹಿತಿಗಳನ್ನು ತಜ್ಞರು ಹಂಚಿಕೊಂಡರು. ಅಲ್ಲದೆ ಲಯನ್ಸ್ ಸಂಸ್ಥೆ ಸದಸ್ಯರು ರೈತರೊಂದಿಗೆ ಗದ್ದೆಳಿದು ಭತ್ತದ ಸಸಿ ನಾಟಿ ಮಾಡಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷೆ ತಾರಾಮಣಿ ಮಾತನಾಡಿ, ರೈತರು ದೇಶದ ಬೆನ್ನೆಲುಬು. ಅವರ ಶ್ರಮವೇ ಸಮಾಜಕ್ಕೆ ಆಧಾರ. ರೈತರ ಜೀವನ ಸುಧಾರಿಸಲು ಮತ್ತು ಅವರನ್ನು ಆರ್ಥಿಕವಾಗಿ ಬಲಪಡಿಸಲು ನಾವು ಸದಾ ಬದ್ಧರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ರಾಯಪುರ ಗ್ರಾಮದ ರೈತರಿಗೆ ಉಚಿತವಾಗಿ ಗೊಬ್ಬರ ನೀಡುವ ಭರವಸೆ ನೀಡುತ್ತೇವೆ ಎಂದರು.

ರಾಯಾಪುರ ಗ್ರಾಮದ ರೈತ ಗಿರೀಶ್ ಮಾತನಾಡಿ, ಲಯನ್ಸ್ ಸಂಸ್ಥೆ ಉತ್ತಮ ಕಾರ್ಯದಿಂದ ನಾವು ಆಧುನಿಕ ಕೃಷಿ ಪದ್ಧತಿ ಬಗ್ಗೆ ತಿಳಿಯುವಂತಾಗಿದೆ. ಗದ್ದೆಗಳಲ್ಲಿ ರೈತರಿಗೆ ಪ್ರಾಯೋಗಿಕ ತರಬೇತಿ ನೀಡಿರುವುದು ನಮಗೆ ಉಪಯುಕ್ತವಾಗಿದೆ. ಕೃಷಿ ಸಲಕರಣೆ, ಗೊಬ್ಬರಗಳನ್ನು ನಮಗೆ ನೀಡಿರುವುದು ಸಂತಸ ಎಂದರು.

ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ, ಪೂವಯ್ಯ, ಸುರೇಶ್, ಕಾರ್ಯದರ್ಶಿ ಆದರ್ಶ ಪ್ರಶಾಂತ್, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net