ರೈತರ ಜಮೀನುಗಳಿಗೆ ಬಿಜೆಪಿ ನೀರು ಹರಿಸುತ್ತೆ

bkt-23-4
Published on

ಬಾಗಲಕೋಟೆ: ರೈತರ ಜಮೀನುಗಳಿಗೆ ನೀರು ಹರಿಸಬೇಕು. ಮತಕ್ಷೇತ್ರದ ರೈತರ ವ್ಯವಸಾಯ ನೀರಾವರಿಯಿಂದ ಕೂಡಿ ಅವರ ಅವರ ಬದುಕು ಸುಧಾರಣೆಯಾಗಲಿ ಎಂಬ ಉದ್ದೇಶದಿಂದ ಶಿರೂರ, ಭಗವತಿ ಏತನೀರಾವರಿ ಯೋಜನೆ ಜಾರಿಗೊಳಿಸಿದ್ದು ಬಿಜೆಪಿ ಸರ್ಕಾರ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಮತಕೇತ್ರ ವ್ಯಾಪ್ತಿಯ ಮನ್ನಿಕಟ್ಟಿ, ಬೆನಕಟ್ಟಿ, ಹಳ್ಳೂರ, ಬೈರಮಟ್ಟಿ, ಚೌಡಾಪುರ ಹಾಗೂ ಬೇವೂರ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶಿರೂರ ಏತನೀರಾವರಿ ಹಾಗೂ ಭಗವತಿ ಏತ ನೀರಾವರಿ ಯೋಜನೆಗೆ ಸರ್ಕಾರ ಅನುಮತಿ ನೀಡಿ, ಅನುದಾನವನ್ನು ನೀಡಿದೆ. ಇದರಿಂದ ಈ ಭಾಗದ ೪೫ ಸಾವಿರ ಎಕರೆ ಭೂಮಿಗೆ ಕೃಷಿ ಚಟುವಟಿಕೆಗೆ ನೀರು ಹರಿದು ಬರಲಿದೆ ಎಂದರು.

ಬೆನಕಟ್ಟಿ ಗ್ರಾಮದಿಂದ ಶಿರೂರ ವರೆಗೆ ಮೂರು ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ೧.೫ ಕೋಟಿಗೂ ಹೆಚ್ಚು ಜೆಜೆಎಂ ಯೋಜನೆ ಜಾರಿಗೊಳಿಸಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ೧೦ ಕೋಟಿ ವೆಚ್ಚದಲ್ಲಿ ೧೧೦ಕೆವ್ಹಿ ವಿದ್ಯುತ್ ಸ್ಟೇಶನ್ ನಿರ್ಮಿಸಲಾಗಿದ್ದು, ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ೪೦೦ ಹೆಚ್ಚು ಉಜ್ವಲ ಯೋಜನೆಯಡಿ ಗ್ಯಾಸ್‌ಸಿಲಿಂಡರ್ ನೀಡಲಾಗಿದೆ. ಹೀಗೆ ಗ್ರಾಮಕ್ಕೆ ಅನೇಕ ಸೌಲಭ್ಯ ನೀಡಲಾಗಿದೆ ಎಂದರು.

ಮನ್ನಿಕಟ್ಟಿಯ ಉಮೇಶ ಜುಮನಾಳ, ಸುರೇಶ ಕೋಟಿ, ಪ್ರಕಾಶ ಕೊನ್ನೂರ, ನೀಲಪ್ಪ ಕಟಗೇರಿ, ಈರಣ್ಣ ಮೇಟಿ, ಹನಮಂತ ಕುರಿ, ಹನಮಪ್ಪ ದೊಡ್ಡಪೂಜಾರಿ, ಪುಂಡಲೀಕಪ್ಪ ಜುಮನಾಳ, ಯಮನೂರ ಅಂಗಡಿ, ಮಂಜು ಪಾಟೀಲ, ಬೆನಕಟ್ಟಿ ಗ್ರಾಮದ ನಿಂಗಪ್ಪ ದಾಸಪ್ಪನವರ, ಭೀಮಸಿ ಕೀಲಬನೂರ, ಮಂಜು ಗೌಡರ, ರವಿ ಅರಿಷಿಣಗೋಡಿ, ವೇಮನ ಯಡಹಳ್ಳಿ, ರಂಗಣ್ಣ ಬೆಣ್ಣೂರ, ರವಿ ಗೆನ್ನೂರ, ಹಳ್ಳೂರಿನ ಸಿ.ಎಂ.ಮೇಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net