

ಬಾಗಲಕೋಟೆ: ರೈತರ ಜಮೀನು, ಹಿಂದುಗಳ ಸ್ಮಶಾನ ಸೇರಿದಂತೆ ವಿವಿಧ ಆಸ್ತಿಗಳ ಪಹಣೆಯಲ್ಲಿ ವಕ್ ಹೆಸರು ಕೂಡಿಸಿರುವ ಪ್ರಕರಣಗಳು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚೆಚ್ಚು ಬೆಳಕಿಗೆ ಬರುತ್ತಿವೆ.
ಇದೀಗ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ರೈತರ ಜಮೀನು ಹಾಗೂ ಸನಾಳ ಗ್ರಾಮದ ಸ್ಮಶಾನ ಮತ್ತು ಬಾದಾಮಿ ಪಟ್ಟಣದಲ್ಲೂ ಸ್ಮಶಾನ ಜಾಗೆಯ ಪಹಣೆಯಲ್ಲಿ ವಕ್ಫ್ ಹೆಸರು ಕೂಡಿಸಿದ್ದಾರೆ.
ತುಂಗಳ ಗ್ರಾಮದಲ್ಲಿ ೧೭೫ಕ್ಕೂ ಅಧಿಕ ಎಕರೆ ಜಾಗೆಯ ೫೦ಕ್ಕೂ ಅಧಿಕ ರೈತರ ಜಮೀನುಗಳ ಪಹಣೆಯಲ್ಲಿ ವಕ್ಫ್ ಹೆಸರು ಇದೆ. ವ್ಯವಸಾಯಗಾರನ ಹಾಗೂ ವಾಸಸ್ಥಳ ಕಾಲಂನಲ್ಲಿ ಮುಲ್ಲಾ ಮಸ್ಜೀದ್ ಸುನ್ನಿ ವಕ್ಫ್ ಆಸ್ತಿ ಎಂದು ದಾಖಲು ಮಾಡಲಾಗಿದೆ. ಇಲ್ಲಿ ಮುಸ್ಲಿಂ ರೈತರು ಸೇರಿದಂತೆ ೫೦ಕ್ಕೂ ಅಽಕ ರೈತರ ಪಹಣೆಯಲ್ಲಿ ವಕ್ ಎಂದು ಉಲ್ಲೇಖಿಸಲಾಗಿದೆ.ಪಹಣೆಯಲ್ಲಿ ವಕ್ಫ್ ಎಂದು ಕುಂತಿರುವುದರಿಂದ ರೈತರಿಗೆ ಸಾಲ ಸೌಲಭ್ಯ ಸಿಗದಾಗಿದೆ. ಕೇಂದ್ರ ಸರ್ಕಾರ ರೈತರಿಗೆ ಕೊಡುವ ೬ ಸಾವಿರ ರೂ. ಕೃಷಿ ಪ್ರೋತ್ಸಾಹ ಧನವೂ ತಮಗೆ ಬರುತ್ತಿಲ್ಲ. ಆಸ್ತಿ ಖರೀದಿ, ಮಾರಾಟವೂ ನಡೆಯುತ್ತಿಲ್ಲ. ಹೀಗಾಗಿ ಮೊದಲು ಪಹಣೆಯಲ್ಲಿನ ವಕ್ಫ್ ಹೆಸರು ತೆರವುಗೊಳಿಸಬೇಕು ಎಂದು ಅಲ್ಲಿನ ರೈತರು ಹೇಳುತ್ತಾರೆ. ರೈತರು ಉಳಿಮೆ ಮಾಡಿಕೊಂಡು ಬಂದಿರುವ ಜಮೀನುಗಳಲ್ಲಿ ರೇಷ್ಮೆ, ಕಬ್ಬು ಸೇರಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಇನ್ನು ಜಮಖಂಡಿ ತಾಲೂಕಿನ ಸನಾಳ ಗ್ರಾಮದ ಸ್ಮಶಾನ ಜಾಗದ ಪಹಣೆಯಲ್ಲೂ ವಕ್ಫ್ ಹೆಸರು ಉಲ್ಲೇಖವಾಗಿದೆ. ಸರ್ವೆ ನಂಬರ್ ೬೧ರಲ್ಲಿ ೨ ಎಕರೆ ೩೦ ಗುಂಟೆ ಜಾಗದ ಪಹಣೆಯ ೯ನೇ ಕಾಲಂನಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿದೆ. ಹಾಗೆಯೇ ಬಾದಾಮಿ ಪಟ್ಟಣದ ರುದ್ರಭೂಮಿ ಜಾಗದ ಪಹಣೆಯಲ್ಲಿ ವಕ್ಫ್ ಹೆಸರು ಇದೆ. ವಕ್ಫ್ ಮಸಣವಾಟ ಎಂದು ಉಲ್ಲೇಖಿಸಿದ್ದಾರೆ. ಸರ್ವೆ ನಂ ೧೨೧/೨ರಲ್ಲಿನ ೩ ಎಕರೆ ಹಿಂದು ರುದ್ರಭೂಮಿ ಪಹಣೆಯ ಕಾಲಂ ನಂ ೯ರಲ್ಲಿ ಮಸಣವಾಟ ವಕ್ ಆಸ್ತಿ ಎಂದು ದಾಖಲಾಗಿದೆ.