

ಬಾಗಲಕೋಟೆ: ಕಳೆದ ೨೦ ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ವಕ್ಫ ಕಾನೂನಿನ ಅಡಿಯಲ್ಲಿ ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರ ನಡೆದಿದೆ. ಅಂದಾಜು ೧೫ ಸಾವಿರ ಎಕರೇ ಜಮೀನು ರೈತರ ಸ್ವಾಧೀನ ತಪ್ಪುವ ಆತಂಕ ಎದುರಾಗಿದೆ. ಕೇವಲ ಮತಗಳಿಕೆಯ ತುಷ್ಠಿಕರಣ ನೀತಿಯಿಂದ ಅಮಾಯಕ ರೈತರು ಕಾಂಗ್ರೆಸ್ ಬಲಿಪಶುವಾಗಿ ನಿರ್ಗತಿಕರಾಗುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಟೀಕಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ೧೯೯೫ ರಲ್ಲಿ ಮತ್ತು ೨೦೧೩ರಲ್ಲಿ ಬಂದಂತಹ ಕಾಂಗ್ರೆಸ್ ಸರ್ಕಾರ ವಕ್ ಕಾನೂನಿಗೆ ಸೆಕ್ಷನ್ ೪೦ಕ್ಕೆ ತಿದ್ದುಪಡಿ ತಂದು ಅದನ್ನು ಸ್ವಚ್ಛ ಆವೃತಿಯ ಕಾನೂನಾಗಿ ಪರಿವರ್ತನೆ ಮಾಡಿದೆ. ಇದರಿಂದ ಬಹುಪಾಲು ರೈತರು ತಲೆಮಾರುಗಳಿಂದ ತಮ್ಮ ಪಿತ್ರಾರ್ಜಿತವಾಗಿ ಉಪಭೋಗಿಸುತ್ತ ಬಂದಂತ ಜಮೀನುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಹಿಂದುಗಳಷ್ಟೇ ಅಲ್ಲ ಅಲ್ಲಲ್ಲಿ ಮುಸ್ಲಿಂ ಬಡವರು ನಿರ್ಗತಿಕರಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರ್ಗತಿಕರಾಗುವಂತ ಸ್ಥಿತಿಗೆ ಬಂದಿದ್ದಾರೇ. ವಕ್ಫ ಕಾನೂನು ರೈತರ ಪಾಲಿನ ಮರಣ ಶಾಸನವಾಗಿದೆ. ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಈ ಕಾನೂನು ಕಂಟಕವಾಗಿದೆ. ಹೋರಾಟ ಆನಿವಾರ್ಯವಾಗಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿ ವಕ ಆಸ್ತಿ ಬಗ್ಗೆ ಸಾರ್ವಜನಿಕ ಪ್ರಕಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.