

ಬಾಗಲಕೋಟೆ: ರೈತರಲ್ಲಿ ಹೊಸ ತಂತ್ರಜ್ಞಾನ ಹಾಗೂ ವಿವಿಧ ಯೊಜನೆಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ರೈತರ ಆದಾಯ ಹೆಚ್ಚಿಸುವತ್ತ ಆಸಕ್ತಿ ಹೊಂದಬೇಕು ಎಂದು ಜಿಲ್ಲಾಽಕಾರಿ ಸಂಗಪ್ಪ ಎಂ. ಹೇಳಿದರು.
ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಜರುಗಿದ ಕೃಷಿ ಮತ್ತು ಕೃಷಿ ಸಂಬAಽತ ವಲಯಗಳಿಗೆ ಐದು ವರ್ಷಗಳ ಸಮಗ್ರ ಕ್ರೀಯಾ ಯೋಜನೆ ತಯಾರಿಕೆ ಕುರಿತ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೃಷ್ಣ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಹರಿಯುವದರಿಂದ ಮೀನುಗಾರಿಕೆ ಕೂಡ ಉತ್ತಮ ಆದಾಯ ನೀಡುವಂತಹ ಕೃಷಿ ಚಟುವಟಿಕೆಯಾಗಿದೆ. ಸಮುದ್ರ ಮೀನಿಗೆ ಬೇಡಿಕೆ ಇರುವಂತೆ ಸಿಹಿ ನೀರಿನ ಮೀನಿಗೆ ಕೂಡ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರಲ್ಲಿ ಮಿನುಗಾರಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕುರಿ ಮೇಕೆ ಸಾಕುವದರೊಂದಿಗೆ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡಾಗ ಸಣ್ಣ ರೈತರಿಗೆ ಆರ್ಥಿಕ ಸಹಾಯ ದೊರೆಯುತ್ತದೆ. ಹೈನುಗಾರಿಕೆಯು ಒಂದು ಉದ್ಯಮವಾಗಿ ಬೆಳೆಯುತ್ತದೆ ಎಂಬುದನ್ನು ರೈತ ಬಾಂಧವರಲ್ಲಿ ಅರಿವು ಮೂಡಿಸಿದಾಗ ಸಹಜವಾಗಿ ರೈತರ ಆದಾಯ ಹೆಚ್ಚಾಗುತ್ತದೆ. ಪ್ರತಿ ಸಾರಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವ ಬದಲು ತೋಟಗಾರಿಕೆ ಮತ್ತು ಇತರೆ ಹೆಚ್ಚಿನ ಮೌಲ್ಯದ ಬೆಳೆಗಳನ್ನು ಬೆಳೆಸಲು ಉತ್ತೇಜಿಸಬೇಕು. ಅದೇ ರೀತಿ ಅವರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.
ಸಾಮಾಜಿಕ ಅರಣ್ಯ ಪ್ರದೇಶಗಳಲ್ಲಿ ಒಂದೇ ರೀತಿಯ ಸಸಿಗಳನ್ನು ನೆಡುವ ಬದಲು ವಿವಿಧ ಜಾತಿಯ ಹಣ್ಣು ಹಂಪಲುಗಳ ಹಾಗೂ ಜನಸ್ನೇಹಿ ಗಿಡ ಮರಗಳ ಸಸಿಗಳನ್ನು ನೆಡುವದರಿಂದ ಪ್ರಾಣಿ ಪಕ್ಷಿಗಳಿಗೂ ಮತ್ತು ಸಾರ್ವಜನಿಕರಿಗೆ ಅನಕೂಲವಾಗುತ್ತದೆ. ಅಲ್ಲದೆ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅರಣ್ಯ ಪ್ರದೇಶದಲ್ಲಿ ಮಳೆಯಿಂದ ಬಿದ್ದ ನೀರು ಹರಿದು ಒಂದೇಡೆ ಸೇರುವ ಜಾಗಗಳಲ್ಲಿ ಆ ನೀರನ್ನು ಸೂಕ್ತ ರೀತಿಯಲ್ಲಿ ಶೇಖರಿಸಿ ಬಳಸಲು ಚಿಕ್ಕ ಕಾಲುವೆ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದು ಸೂಚಿಸಿದರು.
ತಾಲೂಕುವಾರು ಸಾಗುವಳಿ ಭೂಮಿ, ನೀರಾವರಿ ಲಭ್ಯತೆ, ಪರಿವರ್ತನೆಗಿರುವ ಪ್ರದೇಶ, ಹಣಕಾಸಿನ ಅಗತ್ಯತೆ ಕುರಿತು ಸಂಬAಧಪಟ್ಟ ಇಲಾಖೆ ಅಽಕಾರಿಗಳೊಂದಿಗೆ ಜಿಲ್ಲಾಽಕಾರಿ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ÷್ಮಣ ಕಳ್ಳೆನವರ, ಉಪ ನಿರ್ದೇಶಕ ಎಲ್ ಐ ರೂಡಗಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ತೋಟಗಾರಿಕೆ ಉಪನಿರ್ದೇಕ ರವೀಂದ್ರ ಹಕಾಠಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್ ಎಚ್ ಕರಡಿಗುಡಿ ಸೇರಿದಂತೆ ಇತರರು ಇದ್ದರು.