ರುಂಡ ರಹಿತ ಚಿರತೆಯ ಶವ ಪತ್ತೆ

5KWR4
Published on

ಅಂಕೋಲಾ: ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಮೊರಳ್ಳಿಯ ಕೆರೆಯಲ್ಲಿ ರುಂಡ ರಹಿತ ಚಿರತೆಯ ಶವ ಭಾನುವಾರ ಪತ್ತೆಯಾಗಿದೆ. ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಹಿರೆಗುತ್ತಿ ಆರ್​ಎಫ್​ಒ ನರೇಶ ನೇತೃತ್ವದ ತಂಡ ಚಿರತೆಯ ಶವ ಮೇಲೆತ್ತಿ ಪಂಚನಾಮೆ, ಶವ ಪರೀಕ್ಷೆ ನಡೆಸಿದೆ.

ದುಷ್ಕರ್ವಿುಗಳು ಹಲ್ಲು ಮತ್ತು ಉಗುರಿನ ಆಸೆಯಾಗಿ ಚಿರತೆಯನ್ನು ಹೊಡೆದು ರುಂಡ, ಕಾಲುಗಳನ್ನು ಕತ್ತರಿಸಿದ್ದಾರೆ. ಮೃತ ದೇಹಕ್ಕೆ ಕಲ್ಲು ಕಟ್ಟಿ ಕೆರೆಯಲ್ಲಿ ಮುಳುಗಿಸಿದ್ದರು. ಆದರೆ, ದೇಹ ತೇಲಲಾರಂಭಿಸಿದ ಕಾರಣ ಸಾರ್ವಜನಿಕರ ಗಮನಕ್ಕೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net