ರಾಷ್ಟ್ರೀಯ ಹೆದ್ದಾರಿಗೆ 3,972 ಕೋಟಿ ರೂ. ಅನುದಾನ

Iranna Kadadi
Published on

ಚಿಕ್ಕೋಡಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ 11 ವರ್ಷಗಳಲ್ಲಿ ಬೆಳಗಾವಿ ಜಿಲ್ಲೆಯ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ 3,972 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, 238 ಕಿಮೀ ಉದ್ದದ ರಸ್ತೆಗಳು ಪ್ರಗತಿಯಲ್ಲಿವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿಯಿಂದ ಮಹಾರಾಷ್ಟ್ರ ಗಡಿವರೆಗೆ 109.87 ಕಿ.ಮೀ. ಉದ್ದದ 6 ಲೈನ್ ಬೈಪಾಸ್ ಕಾಮಗಾರಿ 2,868 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್ ನಿರ್ಮಾಣಕ್ಕೆ 322 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.

ಲೋಂಡಾ-ಬೆಳಗಾವಿ-ಘಟಪ್ರಭಾ ವಿಭಾಗದ ನಡುವಿನ ರೈಲು ಮಾರ್ಗವನ್ನು ದ್ವಿಗುಣಗೊಳಿಸಲು 930 ಕೋಟಿ ರೂ. ವೆಚ್ಚ ಮಾಡಲಾಗಿದೆ. 927 ಕೋಟಿ ರೂ. ವೆಚ್ಚದ ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮ. ಇದಕ್ಕಾಗಿ ಭೂಸ್ವಾಧೀನ ಪ್ರಗತಿಯಲ್ಲಿದ್ದು 150 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕುಡಚಿ ಬಾಗಲಕೋಟೆ ರೈಲು ಮಾರ್ಗಕ್ಕೆ 210 ಕೋಟಿ ರೂ. ಅನುದಾನ, 190 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ರೈಲು ನಿಲ್ದಾಣ ಅಭಿವೃದ್ಧಿ. ಜಿಲ್ಲೆಯ 4 ರೈಲು ನಿಲ್ದಾಣಗಳನ್ನು ಅಮೃತ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಘಟಪ್ರಭಾ (18.2 ಕೋಟಿ ರೂ.), ಗೋಕಾಕ ರಸ್ತೆ (17 ಕೋಟಿ ರೂ.), ಚಿಕ್ಕೋಡಿ ರಸ್ತೆ (18.5 ಕೋಟಿ ರೂ.), ರಾಯಬಾಗ ನಿಲ್ದಾಣ (18.5 ಕೋಟಿ ರೂ.)ಕ್ಕೆ ಹುಬ್ಬಳಿ ಮತ್ತು ಮಿರಜ್ ರೈಲು ಮಾರ್ಗದ ಡಬಲಿಂಗ್ ಪೂರ್ಣಗೊಂಡು ವಿದ್ಯುತ್ ಚಾಲಿತ ರೈಲು ಸಂಚಾರ ಪ್ರಾರಂಭವಾಗಿದೆ ಎಂದರು.

ಬೆಳಗಾವಿ ನಗರದಲ್ಲಿ 1,622.04 ಕೋಟಿ ರೂ. ವೆಚ್ಚದಲ್ಲಿ 34.48 ಕಿಮೀ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ. ಚಿಕ್ಕೋಡಿ ಬೈಪಾಸ್‌ನಿಂದ-ಗೋಟೂರು ವರೆಗೆ 941.61 ಕೋಟಿ ರೂ. ವೆಚ್ಚದಲ್ಲಿ 27.12 ಕಿಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣ. ಶಿರಗುಪ್ಪಿಯಿಂದ-ಅಂಕಲಿ ವರೆಗೆ 887.32 ಕೋಟಿ ರೂ., ಮುರಗುಂಡಿಯಿಂದ-ಚಿಕ್ಕೋಡಿ ಹತ್ತಿರ ವರೆಗೆ 785.79 ಕೋಟಿ ರೂ. ವೆಚ್ಚದಲ್ಲಿ 50.2 ಕಿಮೀ ಉದ್ದದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ಸಿಗಲಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನೀರು ಒದಗಿಸುವ 1,585 ಕೋಟಿ

ರೂ.ಗಳಲ್ಲಿ 315ಕ್ಕೂ ಹೆಚ್ಚು ಹಳ್ಳಿಗಳ ಪ್ರಯೋಜನವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ದುಂಡಪ್ಪ ಬೆಂಡವಾಡೆ, ಅಪ್ಪಾಸಾಹೇಬ ಚೌಗಲಾ, ಅಮೃತ ಕುಲಕರ್ಣಿ, ಸಿದ್ದು ನರಾಟೆ, ಪವನ ಮಹಾಜನ, ರಾಜು ಹರಗನ್ನವರ, ರಮೇಶ ಕಾಳನ್ನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net