ರಾಷ್ಟ್ರೀಯ ಲೋಕ ಅದಾಲತ್ ಜು.13ರಂದು

2606KLB06
Published on

ಕಲಬುರಗಿ: ಜುಲೈ ೧೩ರಂದು ಜಿಲ್ಲಾದ್ಯಂತ ರಾಷ್ಟಿçÃಯ ಲೋಕ ಅದಾಲತ್ ನಡೆಯಲಿದೆ ಎಂದು ಜಿ¯್ಲÁ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನ್ಯಾಯಾಧೀಶೆ ಎಸ್.ನಾಗಶ್ರೀ ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ ೫೦,೩೦೦ ಪ್ರಕರಣಗಳು ಬಾಕಿ ಇದ್ದು, ಪ್ರತಿ ವರ್ಷ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇವುಗಳನ್ನು ಇತ್ಯರ್ಥ ಮಾಡುತ್ತಿದ್ದು, ಅದಕ್ಕೆ ವೇಗ ನೀಡಲು, ಬೇಗ ಇತ್ಯರ್ಥ ಮಾಡಲು ಲೋಕ್ ಅದಾಲತ್ ಸಹಕಾರಿಯಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚೆಕ್ ಬೌನ್ಸ್, ಹಣ ವಿಲೇವಾರಿ, ವಿದ್ಯುತ್ ಬಿಲ್, ಸಿವಿಲ್ ವ್ಯಾಜ್ಯ, ವಾಹನ ಅಪಘಾತ ಸೇರಿ ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ ಪ್ರಕರಣಗಳನ್ನು ಉಭಯ ಕಕ್ಷಿದಾರರ ಮನವೊಲಿಸಿ, ಜನತಾ ನ್ಯಾಯಾಲಯದಲ್ಲಿ ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು ಎಂದರು.
೨೦೨೩ರ ಡಿಸೆಂಬರ್, ಪ್ರಸಕ್ತ ವರ್ಷದ ಮಾರ್ಚ್ನಲ್ಲಿ ಸಾವಿರಾರು ಪ್ರಕರಣಗಳು ಬಗೆಹರಿಸಿದ್ದು, ಈ ಬಾರಿ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥದ ಗುರಿ ಹೊಂದಲಾಗಿದೆ. ಜನತಾ ನ್ಯಾಯಾಲಯ ತೀರ್ಪು ಮಹತ್ವದಾಗಿದ್ದು, ಮೇಲ್ಮನವಿ, ಖರ್ಚು ವೆಚ್ಚ ಇರಲ್ಲ. ಗ್ರಾಮೀಣ ಭಾಗದ ಮುಗ್ದ, ಅನಕ್ಷರಸ್ಥರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಅವರು ಅದಾಲತ್ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಶ್ರೀನಿವಾಸ ನವಲೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net