ರಾಷ್ಟ್ರೀಯ ಹೆದ್ದಾರಿ ಅಂಚಿನ ಮರಗಳ ಟೊಂಗೆ ಕಟಾವು

17ANKOLA2
Published on

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರ ಇಕ್ಕೆಲ್ಲದಲ್ಲಿರುವ ಮರಗಳು ಬೆಳೆದು ಟೊಂಗೆಗಳು ರಸ್ತೆಗೆ ಬಾಗಿ, ವಾಹನ ಚಾಲಕರಿಗೆ ಎದುರಿಗೆ ಬರುವ ವಾಹನಗಳ ಸ್ಪಷ್ಟವಾಗಿ ಕಾಣದೆ ಅಪಘಾತ ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ಇತ್ತೀಚೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮೀಕ್ಷೆ ನಡೆಸಿ ಮರಗಳ ಟೊಂಗೆಗಳನ್ನು ತೆರವು ಗೊಳಿಸಲಾಯಿತು. ಇತ್ತೀಚೆಗೆ ಸಂಭವಿಸಿದ ಸರಣಿ ಅಪಘಾತದ ಹಿನ್ನೆಲೆಯಲ್ಲಿ ಹೆಸ್ಕಾಂ, ಅರಣ್ಯ, ಪೊಲೀಸ್ ಇಲಾಖೆಗಳು ಮತ್ತು ಗ್ರಾಪಂ ಪಿಡಿಒ, ಸ್ಥಳೀಯ ಜನಪತ್ರಿನಿಧಿಗಳ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸಮೀಕ್ಷೆ ತಂಡ ಕಾರ್ಯಾಚರಣೆ ಕೈಗೊಂಡಿತು. ಮೊದಲೇ ತಂಡ ಗುರುತಿಸಿದ್ದ ಕಂಚಿನ ಬಾಗಿಲು, ಅಗಸೂರು, ಹೆಬ್ಬಳು, ಸುಂಕಸಾಳ, ರಾಮನಗುಳಿ ಸೇರಿದಂತೆ ಹಲವರು ಪ್ರದೇಶದಲ್ಲಿ ರಸ್ತೆ ಅಂಚಿಗೆ ಮರದ ಟೊಂಗೆಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹೆಚ್ಚುವರಿ ಎಸ್ಪಿ ಬದರಿನಾಥ, ಡಿವೈಎಸ್ಪಿ ಅರವಿಂದ ಕಲ್ಲಗುಜ್ಜಿ, ಪಿಐ ಕೃಷ್ಣಾನಂದ ನಾಯಕ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಪ್ರಶಾಂತ, ಎಆರ್​ಡಿ ರವಿ ಇತರರು ಸಮೀಕ್ಷೆ ನಡೆಸಿದರು. ಎಸೈ ಈ.ಸಿ. ಸಂಪತ, ಹೆಸ್ಕಾಂ ಅಧಿಕಾರಿ ಗೀತಾ, ಮಾಸ್ತಿಕಟ್ಟಾ ಆರ್​ಎಫ್​ಒ ರಾಘವೇಂದ್ರ, ಗ್ರಾಪಂ ಸದಸ್ಯ ಪ್ರವೀಣ ನಾಯರ್, ಪಿಡಿಒ ಗಿರೀಶ ನಾಯಕ, ಸಂತೋಷ ತಳೇಕರ್ ಇತರರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net