ರಾಷ್ಟ್ರದ್ರೋಹಿಗಳನ್ನು ಅರೆಸ್ಟ್ ಮಾಡಿದರೆ ಇವರಿಗೆ ಉರಿ

bkt-15-9
ಮಾಜಿ ಡಿಸಿಎಂ ಈಶ್ವರಪ್ಪ
Published on

ಬಾಗಲಕೋಟೆ: ವೋಟ್ ಐಡಿ ಹೊರಗೆ ಬಂದ ತಕ್ಷಣ ಕುಕ್ಕರ ಬ್ಲಾಸ್ಟ್ ಆಗೋಯ್ತು ಎನ್ನುವ ಮೂಲಕ ಬಿಜೆಪಿ ಕೈಗೆ ಮತ್ತೊಂದು ಅಸö ಕೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರಗೆ ಬಾಗಲಕೋಟೆಯಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಟಕ್ಕರ ಕೊಟ್ಟಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರು, ರಾಷ್ಟ್ರದ್ರೋಹಿಗಳನ್ನು ಬೆಳೆಸಿದ್ದು ಕಾಂಗ್ರೆಸ್‌ನವರು. ಹೀಗಾಗಿ ಕುಂಬಳಕಾಯಿ ಕಳ್ಳ ಅಂದರೆ ಇವರು ಹೆಗಲು ಮುಟ್ಟಿಕೊಳ್ಳುತ್ತಾರೆ. ರಾಷ್ಟ್ರದ್ರೋಹಿಗಳನ್ನು ಅರೆಸ್ಟ್ ಮಾಡಿದರೆ ಇವರಿಗೆ ಯಾಕೆ ಮೆಣಸಿನಕಾಯಿ ಇಟ್ಟಂಗೆ ಉರಿಯುತ್ತೆ ಎಂದು ಡಿಕೆಶಿಗೆ ತಿವಿದಿದ್ದಾರೆ.
ವೋಟರ್ ಐಡಿ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಅದಕ್ಕೂ ಇದಕ್ಕೂ ಏನು ಸಂಬಂಧ? ಕುಕ್ಕರ ಬ್ಲಾಸ್ಟ್ ಪ್ರಕರಣದಲ್ಲೂ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈಗ ಡಿಕೆಶಿ ಅದು, ಇದು ಅಂತ ಹೇಳಿದರೆ ಜನರು ಕೇಳ್ತಾರಾ? ಜನರು ದಡ್ಡರಲ್ಲ, ಡಿಕೆಶಿ ದಡ್ಡ ಎಂದು ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.
ಕಳ್ಳನಿಗೆ ಕಳ್ಳ ಅಂದರೆ ಸಿಟ್ಟು ಬರುತ್ತದೆ. ಡಿಕೆಶಿ ತಾನು ತಿಹಾರ ಜೈಲಿಗೆ ಹೋಗಿ ಬಂದಿಲ್ಲ. ಒಂದು ನೋಟು ಯಾರೂ ಕಂಡಿಲ್ಲ. ಒಂದು ಬಾಕ್ಸï ನಲ್ಲೂ ದಾಖಲೆಗಳು ಇಲ್ಲ ಎಂದು ಹೇಳಲಿ. ನೀನು ಕಳ್ಳ ಅಂತ ಹೇಳುತ್ತಿದ್ದಂತೆ ಇಂತವೆಲ್ಲ ತೆಗೆಯುತ್ತಾರೆ. ಅವರು ಏನೇ ಹುಡುಕಿದರೂ ಅವರಿಗೆ ನಮ್ಮದು ಒಂದು ಕೂದಲು ಸಿಗಲ್ಲ ಎಂದು ಚಾಟಿ ಬೀಸಿದರು.
ಬಿಎಸ್‌ವೈ ಬ್ರೇಕ್ ಹಾಕಲು ಯಾರಿಗೆ ಆಗುತ್ತೆ…?
ನನ್ನ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮಾಜಿ ಸಿಎಂ ಬಿಎಸ್‌ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಿಜ, ಅವರು ನಮ್ಮ ನಾಯಕರು. ಅವರಿಗೆ ಬ್ರೇಕ್ ಹಾಕಲು ಯಾರ ಕೈಯಲ್ಲಿ ಆಗುತ್ತೆ? ಬಿಎಸ್‌ವೈ ಮಾತಿನ ಅರ್ಥ ಬಿಜೆಪಿಯನ್ನು ಮುಗಿಸಲು ಈ ದೇಶದಲ್ಲಿ ಯಾರ ಕೈಯಿಂದಲೂ ಆಗಲ್ಲ. ಕಾಂಗ್ರೆಸ್ ನೆಗೆದು ಬಿದ್ದಾಗಿದೆ. ಕರ್ನಾಟಕದಲ್ಲಿ ಒಂಚೂರು ಕುಟುಕುಟು ಎನ್ನುತ್ತಿದೆ. ಮುಂದಿನ ಚುನಾವಣೆ ಬಳಿಕ ಅದು ಮುಗಿದು ಹೋಗುತ್ತದೆ.
ನೀವು (ಮಾಧ್ಯಮಗಳು)ಪದಗಳನ್ನು ಹುಡುಕುತ್ತ ಹೋದರೆ ಅದಕ್ಕೆ ನಾನು ಏನು ಹೇಳಲು ಆಗಲ್ಲ. ಯಡಿಯೂರಪ್ಪ ನಮ್ಮ ರಾಷ್ಟ್ರೀಯ ನಾಯಕರು. ಅವರಿಗೆ ಕೇಂದ್ರದಿಂದ ಎಲ್ಲಿ ಹೋಗಬೇಕು ಅಂತ ಸೂಚನೆ ಬರುತ್ತದೆ ಅಲ್ಲಿಗೆ ಹೋಗುತ್ತಾರೆ. ಹಾಗೆಂದು ನೀವು ಅವರು ಎಲ್ಲ ಸಂಕಲ್ಪ ಯಾತ್ರೆಗಳಿಗೆ ಬಂದಿಲ್ಲ ಏಕೆ ಎಂದರೆ ಏನು ಹೇಳುವುದು?
ಈ ಕಾಂಗ್ರೆಸ್‌ನವರು ನೀವು ಮಸಾಲೆ ಸಮೇತ ಅಡುಗೆ ಮಾಡಿ ನಾವು ತಿನ್ನುತ್ತೇವೆ ಎನ್ನುತ್ತಾರೆ. ನಾವು ಬಿಟ್ಟು ಬಿಡುತ್ತೇವಾ? ಕುರಿನೂ ಬಿಡಲ್ಲ, ಕೋಳಿನೂ ಬಿಡಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು ಈಶ್ವರಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net