

ಕಲಬುರಗಿ: ಭಾರತದ ಭವಿಷ್ಯ ನಿರ್ಮಾಣಕ್ಕಾಗಿ ಯುವಕರು ಸಂಕಲ್ಪ ಮಾಡಬೇಕು ಎಂದು ಯುವ ನಾಯಕ ಚಂದು ಪಾಟೀಲ್ ಕಿವಿಮಾತು ಹೇಳಿದರು.
ಸೇಡಂ ರಸ್ತೆಯ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಾತಂತ್ರೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶ ಸ್ವಾತಂತ್ರÈ ಕಂಡಿದೆ. ಯುವಕರು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜತೆಗೆ ದೇಶದ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್ ರಾಷ್ಟç ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯುವ ಪೀಳಿಗೆ ದೇಶಕ್ಕಾಗಿ ಸಮಯ ಮೀಸಲಿಡಬೇಕು. ದೇಶ ಉಳಿದರೆ ನಾವು ಎಂಬುದನ್ನು ಅರಿಯಬೇಕು. ಮುಂದಿನ ದಿನಗಳಲ್ಲಿ ಭಾರತಕ್ಕೆ ದೊಡ್ಡ ಭವಿಷ್ಯವಿದೆ ಎಂದು ಹೇಳಿದರು.
ಸಂಸ್ಥೆ ನಿರ್ದೇಶಕ ಡಾ.ಕೈಲಾಶ ಪಾಟೀಲ್, ಪ್ರಾಚಾರ್ಯ ಕೆ.ರವಿಕುಮಾರ, ಉಪ ಪ್ರಾಚಾರ್ಯ ಆಕಾಶ ಉಬಾಳೆ, ಕಾಲೇಜಿನ ಪ್ರಾಚಾರ್ಯ ಡಾ.ಆರ್. ಕೃಷ್ಣಮೂರ್ತಿ ಇತರರಿದ್ದರು.