ರಾಯರಡ್ಡಿ ಬಗ್ಗೆ ಕೋನನಗೌಡಗೆ ಅರಿವಿಲ್ಲ

kknr
ಡಾ.ಮಲ್ಲಿಕಾರ್ಜುನ ಬಿನ್ನಾಳ.
Published on

ಕುಕನೂರು: ಶಾಸಕ ಬಸವರಾಜ ರಾಯರಡ್ಡಿ ಬಗ್ಗೆ ಜೆಡಿಎಸ್ ಮುಖಂಡ ಮಲ್ಲನಗೌಡ ಕೋನನಗೌಡರ್‌ಗೆ ಏನೂ ತಿಳಿದಿಲ್ಲ. ಹೀಗಾಗಿ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿನ್ನಾಳ ದೂರಿದರು.


ಮಾಜಿ ಪ್ರಧಾನಿ ದೇವೇಗೌಡರ ಸಂಪುಟದಲ್ಲಿ ಸಚಿವರಾಗಿದ್ದ ಈಗಲೂ ಅವರ ಕುಟುಂಬದೊಂದಿಗೆ ಆತ್ಮೀಯತೆ ಹೊಂದಿರುವ ರಾಯರಡ್ಡಿ, ಈಚೆಗೆ ತಳಕಲ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಎಚ್.ಡಿ ಕುಮಾರಸ್ವಾಮಿ ಜತೆ ಆತ್ಮೀಯವಾಗಿ ಮಾತನಾಡಿದ್ದಾರೆ.

ಇದನ್ನೇ ಅಪಾರ್ಥ ಮಾಡಿಕೊಂಡ ಮಲ್ಲನಗೌಡ, ರಾಯರಡ್ಡಿ ಮುಖಕ್ಕೆ ಮಸಿ ಬಳಿಯುವ ಮಾತನಾಡಿರುವುದು ಖಂಡನೀಯ. ಏನೇ ಮಾತನಾಡುವುದಿದ್ದರೂ ರಾಯರಡ್ಡಿ ಹಿನ್ನೆಲೆ, ಅವರಿಂದಾದ ಅಭಿವೃದ್ಧಿ ಕಾರ್ಯಗಳನ್ನು ನೆನೆದು ಮಾತನಾಡಬೇಕೆಂದು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net