

ಕೆಕೆಆರ್‌ಡಿಬಿಗೆ ಸಿಎಂ ಅಧ್ಯಕ್ಷರಾದರೆ ಒಳ್ಳೆಯದು
,ಕಲಬುರಗಿ : ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಶಾಸಕರನ್ನು ನೇಮಿಸುಸವುದು ಬೇಡ.ಬದಲಿಗೆ ಸಚಿವರೆ ಅಧ್ಯಕ್ಷರಾಗಲಿ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಮಂತ್ರಿಗಳಾಗುವುದು ಸೂಕ್ತ. ಅದರಲ್ಲೂ ಮುಖ್ಯಮಂತ್ರಿಗಳೇ ಮಂಡಳಿ ಅಧ್ಯಕ್ಷ ರಾಗಲಿ ಎಂಬುದು ನನ್ನ ಒತ್ತಾಯವಾಗಿದೆ. ಇದರಿಂದಾಗಿ ಅಭಿವೃದ್ಧಿ ವೇಗ ಇಮ್ಮಡಿಸಲಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೆಕೆಆರ್‌ಡಿಬಿಯಿಂದ ಪರಿಣಾಮಕಾರಿ ಕೆಲಸಗಳಾಗಿಲ್ಲ ಆಗಿಲ್ಲ. ಹೀಗಾಗಿ ಅನುಭವ ಇದ್ದವರೆ ಅಧ್ಯP್ಷÀರಾಗಲಿ. ಆ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿ ಎಂದರು. ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಆಸ್ತಕ್ತಿಯೇ ಇಲ್ಲ. ಆಗಬೇಕು ಎಂಬ ಆಸೆಯು ಇಲ್ಲ ಎಂದು ಹೇಳಿದರು.