ರಾಮಮಂದಿರ ಸ್ಥಾಪನೆಗೆ ನಿಧಿ ಸಂಗ್ರಹ ಅಭಿಯಾನ

16 AKR 03 A
Published on

ಅಕ್ಕಿಆಲೂರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರೆ ಮೇರೆಗೆ ನಿಧಿ ಸಂಗ್ರಹಕ್ಕೆ ಪಟ್ಟಣದ ಚನ್ನವೀರೇಶ್ವರ ವಿರಕ್ತಮಠದಲ್ಲಿ ಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಶನಿವಾರ ಚಾಲನೆ ನೀಡಿದರು.

ಮಠದಲ್ಲಿ ಬೆಳಗ್ಗೆ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಗಳು, ಅಕ್ಕಿಆಲೂರಿನ ಪೇಟೆಓಣಿ, ಹಳೂರ ಓಣಿ, ಕೆಳಗಿನ ಓಣಿ ಮೊದಲಾದೆಡೆ ಸಂಚರಿಸಿ ನಿಧಿ ಸಂಗ್ರಹಿಸಿದರು.

ನಿಧಿ ಸಂಗ್ರಹಕ್ಕಾಗಿ ಪಟ್ಟಣದ ಎಲ್ಲ ಹಿಂದುಪರ ಸಂಘಟನೆ, ಮಹಿಳಾ ಸಂಘಟನೆಗಳು ಒಂದೊಂದು ಬಡಾವಣೆಯಲ್ಲಿ ನಿತ್ಯ ಸಂಚರಿಸಲಿದ್ದು, ಪ್ರತಿ ಹಿಂದುಗಳ ಮನೆಯಿಂದ ಒಬ್ಬ ಸದಸ್ಯ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾನೆ. ನೌಕರರು, ಸಹಕಾರಿ ಸಂಘಗಳು, ಸ್ವಯಂ ಸೇವಾ ಸಂಘಟನೆಗಳು ಸ್ವಯಂ ಪ್ರೇರಣೆಯಿಂದ ನಿಧಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದು ಆರ್​ಎಸ್​ಎಸ್ ತಾಲೂಕು ಪ್ರಮುಖ ರಾಜು ಹೈಬತ್ತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net