

ಬಾಗಲಕೋಟೆ: ಅಯೋದ್ಯಲ್ಲಿ ಫ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇದೆ 19 ರಂದು ರಾಮನಾಮ ತಾರಕ ಹೋಮವನ್ನು ಹಮ್ಮಿಕೊಂಡಿದ್ದು ಅದನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಶುಕ್ರವಾರ ಬಸವೇಶ್ವರ ವೀರಶೈವ ವಿಧ್ಯಾವರ್ಧಕ ಸಂಘದ "ಮಿನಿ ಅಡಿಟೋರಿಯಮ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ "ರಾಮನಾಮ ತಾರಕ ಹೋಮ"ದ ಪೂರ್ವಭಾವಿ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಯೋಧ್ಯಪತಿ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆ ನಿಮಿತ್ಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದೆ 19 ರಂದು ವಿದ್ಯಾಗಿರಿಯಲ್ಲಿನ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಸಕಲ ಸಮಾಜದ 108 ದಂಪತಿಗಳಿಂದ 108 ಹೋಮ ಕುಂಡದಲ್ಲಿ ರಾಮನಾಮ ತಾರಕ ಹೋಮ ಹಮ್ಮಿಕೋಂಡಿದ್ದು, ಅಂದು ಎಲ್ಲ ಹಿಂದು ಸಮಾಜ ಎಲ್ಲ ವರ್ಗದವರು ಭಾಗವಹಿಸಿ ಯಶಸ್ವಿಗೊಳಿಸಬೇಕು. ಅಲ್ಲದೆ. ದಿನಾಂಕ 22 ರಂದು ಗ್ರಾಮೀಣ ಹಾಗೂ ನಗರಗಳಲ್ಲಿನ ಎಲ್ಲ ದೇವಸ್ಥಾಗಳಲ್ಲಿ ಪೂಜೆ ಕಾರ್ಯ ಜರಗಿಸಬೇಕು ಮನೆಯಲ್ಲಿ ಸಿಹಿ ಪದಾರ್ಥ ಮಾಡಿ ಸಾಯಂಕಾಲ ದೀಪಾವಳಿಯಂತೆ ಐದು ದೀಪಗಳನ್ನು ಮನೆಮುಂದೆ ಬೇಳಗಿಸಬೇಕು ಎಂದರು.
ಸಭೆಯಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಕುಮಾರ ಯಳ್ಳಿಗುತ್ತಿ, ಸದಾನಂದ ನಾರಾ,ಸುರೇಶ ಕೊಣ್ಣುರ, ರಾಜು ರೇವಣಕರ, ಸಿ.ವಿ.ಕೋಟಿ,ಮಹಾಂತೇಶ ಶೆಟ್ಟರ, ಯಲ್ಲಪ್ಪ ಬೆಂಡಿಗೇರಿ, ಶಿವಾನಂದ ಟವಲಿ, ಸಂಗಮೇಶ ಗುಡ್ಡದ, ಪ್ರಬು ಸಂಗಪ್ಪ ಸಜ್ಜನ, ಬಸವರಾಜ ನಾಶಿ, ಪ್ರಭು ಹಡಗಲಿ,ಮುತ್ತಣ್ಣ ಬೇಣ್ಣೂರ, ಸಾಗರ ಬಂಡಿ, ಶ್ರೀನಾಥ ಸಜ್ಜನ, ರಮೇಶ ಕೋಟಿ, ರವಿ ಧಾಮಜಿ, ಯಲ್ಲಪ್ಪ ಭಜಂತ್ರಿ, ರಾಮಣ್ಣ ಜುಮನಾಳ,ಬಸವರಾಜ ಅವರಾದಿ, ಭಾಗಿರತಿ ಪಾಟೀಲ, ಅನಿತಾ ಸರೋಧೆ, ಜ್ಯೋತಿ ಭಜಂತ್ರಿ, ನಾಗರತ್ನಾ ಹೆಬ್ಬಳಿ, ಶಾಂತಾ ಹನಮಕ್ಕನವರ, ಕವಿತಾ ಲಂಕೆನ್ನವರ, ಸರಸ್ವತಿ ಕುರಬರ,ಸುಜಾತಾ ಶಿಂಧೆ,ಪ್ರೇಮಾ ಅಂಬಿಗೇರ, ಶಿವಲೀಲಾ ಪಟ್ಟಣಶೆಟ್ಟಿ ಸೇರಿದಂತೆ ಸಕಲ ಸಮಾಜದ ಮುಖಂಡರು ಇದ್ದರು.