ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ - ವಿಶ್ವಾಸ ವೈದ್ಯ

102030
Published on

ಮುನವಳ್ಳಿ: ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ ಆರೋಗ್ಯದ ಹಂಗು ತೊರೆದು ದಿನನಿತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು. ಪೌರಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ಬೆಳಗಬೇಕು. ಪೌರಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಪ್ರತಿಯೊಬ್ಬರಿಗೂ 1. ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷ ಸಿ.ಬಿ. ಬಾಳಿ ಮಾತನಾಡಿ, ಪೌರಕಾರ್ಮಿಕರು ಸ್ವಚ್ಛತೆಯ ರೂವಾರಿಗಳು. ಅವರ ಶ್ರೇಯೋಭಿವೃದ್ಧಿಗೆ ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ ಮಾತನಾಡಿ, ಪೌರಕಾರ್ಮಿಕರನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಪೌರಕಾರ್ಮಿಕರಿಗೆ 7 ಸಾವಿರ ರೂ. ವಿಶೇಷ ಭತ್ಯೆ ನೀಡಲಾಯಿತು. ವಿವಿಧ ಕ್ರೀಡೆಗಳನ್ನು ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು.

ಎಪಿಸಿಎಂಎಸ್ ಅಧ್ಯಕ್ಷ ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಪೂಜೇರ, ನಾಗಪ್ಪ ಕಾಮಣ್ಣವರ, ಕಲ್ಲಪ್ಪ ಕಿತ್ತೂರ, ಮುಬಾರಕ್ ಭೈರಕದಾರ, ಪ್ರಕಾಶ ಕಾಮಣ್ಣವರ, ಪ್ರಸಾದ ವಿರೂಪಯ್ಯನವರಮಠ, ಪಂಚು ಬಾರಕೇರ, ಪುರಸಭೆ ಉಪಾಧ್ಯಕ್ಷೆ ಕಾಶವ್ವ ಹಿರೇಮೇತ್ರಿ, ಪುರಸಭೆ ಸದಸ್ಯರಾದ ಈಶ್ವರ ಕರೀಕಟ್ಟಿ, ಮೀರಾಸಾಬ್ ವಟ್ನಾಳ, ಶ್ರೀಶೈಲ ನೇಗಿನಾಳ, ಪುರಸಭೆ ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಆರೋಗ್ಯ ನಿರೀಕ್ಷಕ ಎಸ್.ಜಿ.ಗೌಡರ, ಬಿ.ಎಸ್.ಹಲಗಿ, ಅಡಿವೆಪ್ಪ ಬೀರಸಿದ್ದಿ, ಯಲ್ಲಪ್ಪ ಭಜಂತ್ರಿ, ಗಣಪತಿ ಪೋಳ, ಸುರೇಶ ಮಾನೆ, ಬಾಬಾಜಾನ ಅತ್ತಾರ, ಬಸವರಾಜ ಹನಸಿ, ಮುದಕಪ್ಪ ಜಂಬಗಿ, ಈರಣ್ಣ ಪ್ರಭುನವರ, ಮುತ್ತು ಪಾಗದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net