

ಕಲಬುರಗಿ: ದೇಶದೆಲ್ಲೆಡೆ ಪ್ರಸಕ್ತ ವರ್ಷ ರಾಮನವಮಿ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದು, ಭಾರತವನ್ನು ರಾಮ ರಾಜ್ಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ಜೇವರ್ಗಿ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಬುಧವಾರ ದರ್ಶನ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನ ಆದರ್ಶ ಸರ್ವರಲ್ಲೂ ಪರಿಪಾಲಿಸುವಂತಾದರೆ ಆದರ್ಶ ಸಮಾಜ ಸೃಷ್ಟಿಸಲು ಸಾಧ್ಯ. ರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲ¯್ಲÁನ ಮಂದಿರ ನಿರ್ಮಾಣವಾಗಿದ್ದು, ಪ್ರಸಕ್ತ ವರ್ಷ ಹಿಂದಿಗಿAತಲೂ ಮಹತ್ವ ಪಡೆದಿದೆ. ಶ್ರೀರಾಮ ಎಲ್ಲರಿಗೂ ನೆಮ್ಮದಿ, ಸಮೃದ್ಧಿ ಕರುಣಿಸಲಿ ಎಂದರು.
೫೦೦ ವರ್ಷದ ನಂತರ ಅಯೋಧ್ಯೆಯಲ್ಲಿ ಭವ್ಯ ದೇಗುಲ ನಿರ್ಮಾಣ ಆಗಿರುವುದು ಸನಾತನ ಹಿಂದು ಧರ್ಮದ ಮಾನಬಿಂಧುವಾಗಿದೆ. ರಾಮನ ಆದರ್ಶ ಇಡೀ ವಿಶ್ವಕ್ಕೆ ಅನುಕರಣೀಯವಾದುದು. ಶ್ರೀರಾಮ ಮಹಾನ್ ಆಡಳಿತಗಾರ, ಸಾರ್ವಜನಿಕ ಸೇವೆಯಲ್ಲಿರುವವರಿಗೆ ಸದಾ ಆದರ್ಶಪ್ರಾಯ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ವಿದ್ಯಾಧರ ಭಟ್, ಡಾ.ಉಮೇಶ ಜಾಧವ್, ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯ ನರಸಿಂಹ ಮೆಂಡನ್, ಮುರಳಿಧರ ಗಿರಿಧರ ಭಟ್, ನಾಗರಾಜ ಆಚಾರ್ಯ ನಿರಂಜನರಾವ ಇತರರಿದ್ದರು.