ರಾಜ್ಯಪಾಲರಿಂದ ಸಮುದ್ರ ಪೂಜೆ

IMG-20220917-WA0055.jpg
Published on

ಕಾರವಾರ: ಅಂತಾರಾಷ್ಟ್ರೀಯ ಕಡಲ ತೀರದ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ರಾಜ್ಯಪಾಲ ಥಾವರಚಂದ ಗೆಹಲೋತ್ ಇಲ್ಲಿನ ಟ್ಯಾಗೋರ್ ತೀರದಲ್ಲಿ ಸಮುದ್ರ ಪೂಜೆ ನೆರವೇರಿಸಿದರು.

ನಂತರ ಕಸ ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು‌. ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಅತುಲ್ ಆನಂದ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇತರರು ಇದ್ದರು.

ತೀರ ಸ್ವಚ್ಛತೆ: ಸುರಕ್ಷಿತ ಸಾಗರ, ಸ್ವಚ್ಛ ಸಾಗರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆ ನಡೆಯಲಿದೆ.ದೇಶದ 75 ಕಡಲ ತೀರಗಳಲ್ಲಿ ಏಕ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಟ್ಯಾಗೋರ್ ಹಾಗೂ ಮುರ್ಡೇಶ್ವರ ತೀರದಲ್ಲಿ ಸ್ವಚ್ಛತೆ ನಡೆಯುತ್ತಿದೆ. 4 ಕಿಮೀ ಟ್ಯಾಗೋರ್ ಕಡಲ ತೀರದಲ್ಲಿ ಒಟ್ಟು 5 ಸಾವಿರ ಜನ ಏಕ ಕಾಲದಲ್ಲಿ ಸ್ವಚ್ಛತೆ ಕೈಗೊಂಡರು. ಎಲ್ಲ ಇಲಾಖೆ ನೌಕರರು, ಎನ್ ಸಿಸಿ, ಎನ್ ಎಸ್ಎಸ್, ಸ್ಕೌಟ್, ಗೈಡ್ಸ್ ಕಾರ್ಯಕರ್ತರು ಒಟ್ಟು 10 ತಂಡಗಳಾಗಿ ಸ್ವಚ್ಛತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net