ರಾಜ್ಯದಲ್ಲಿ ಸದ್ಯ ಸಿಎಂ ಬದಲಾವಣೆ ಸಾಧ್ಯತೆ ಇಲ್ಲ

images
Published on

ಬಾಗಲಕೋಟೆ: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಪಕ್ಷದೊಳಗೆ ಮತ್ತು ಹೊರಗಡೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯತೆ ಇಲ್ಲ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಬಾಗಲಕೋಟೆಯಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬದಲಾವಣೆ ವಿಚಾರದಲ್ಲಿ ಸಂಗಮೇಶನೊಲಿವನೆ ಆದರೆ, ಹೊಳಅಡ್ಡ ಬಂದಿದೆ. ಹೊಳೆಯನ್ನು ಈಜಿದರೆ ಬದಲಾವಣೆ ಆಗಬಹುದು. ಆದರೆ, ಆ ಶಕ್ತಿ ಇದ್ದರೆ ಮಾತ್ರ ಎಂದು ಒಗಟಾಗಿ ಹೇಳಿದರು.

ಈ ಹಿಂದೆಯೇ ನಾನು ಹೇಳಿದ್ದೆ. ಹಾಲುಮತದವರಿಗೆ ಅಽಕಾರ ಬಂದರೆ ಅದನ್ನು ಬಿಡಿಸಿಕೊಳ್ಳುವುದು ಕಷ್ಟ. ಅವರಾಗಿಯೇ ಅಽಕಾರ ಬಿಡಬೇಕು. ಕಾರಣ ಹಿಂದೆ ವಿಜಯನಗರ ಸಾಮ್ರಾಜ್ಯ ಹಕ್ಕ-ಬುಕ್ಕರು ಕಟ್ಟಿದ್ದು. ಇವತ್ತು ಅದೇ ಚಿನ್ಹೆ ಇರುವುದು. ಮೈಸೂರ ದಸರಾ ಅದೇ ನಡೆಯುತ್ತಿರುವುದು. ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಆ ಮತದವರ ಕೈಯಲ್ಲಿ ಅಽಕಾರ ಸಿಕ್ಕಿರುವುದರಿಂದ ಬಿಡಿಸುವುದು ಕಷ್ಟ. ಅವರಾಗಿಯೇ ಬಿಟ್ಟರೆ ನಿಮಗೆ ಸಿಗುತ್ತದೆ. ಉಳಿದಿದ್ದು ದೈವಿಚ್ಛೆ ಎಂದರು.

ಮು0ದಿನ ಸಂಕ್ರಾ0ತಿ ಬಳಿಕ ಏನಾದರೂ ಬದಲಾವಣೆ ಇದೆಯಾ ಎನ್ನುವ ಪ್ರಶ್ನೆಗೆ, ಅದನ್ನು ಸಂಕ್ರಾAತಿ ಬಳಿಕವೇ ನಿಖರವಾಗಿ ಹೇಳಬೇಕು. ಅದು ಈಗ ಅಲ್ಲ. ಸದ್ಯ ಬದಲಾವಣೆ ಸಾಧ್ಯತೆ ಇಲ್ಲ ಎಂದು ಭವಿಷ್ಯ ಹೇಳಿದರು.

ಈ ಸಂವತ್ಸವರದಲ್ಲಿ ಪ್ರಾಕೃತಿಕವಾಗಿ ಬಹಳ ಅಪಾಯವಿದೆ. ಜಗತ್ತಿನಾದ್ಯಂತ ಅಪಾಯವಿದೆ. `ಸೂಳೆಯ ಮಗನು ಹುಟ್ಟಿ ಆಳುವನು ಮುನಿಪುರವ, ಯುದ್ಧವಿಲ್ಲದೆ ಮಡಿಯೆ ಪುರವೆಲ್ಲ ಕೋಳಾದೀತು, ಅರಸಾನಲಯಕ್ಕೆ ಕಾರ್ಮೋಡ ಕವಿದೀತೆ' ಸ್ಟೇಟ್‌ಗೂ ಸೆಂಟ್ರಲ್‌ಗೂ ಇದು ಇದೆ. ನೋಡುತ್ತಾ ಇರಿ ಇದರ -Àಲಿತಾಂಶ ಗೊತ್ತಾಗುತ್ತದೆ ಎಂದರು.

ಯುದ್ಧಭೀತಿ ಸಾವು-ನೋವು ಇರುತ್ತದೆ. ದೊಡ್ಡ ರೋಗ ಬರುತ್ತದೆ, ಐದು ವರ್ಷ ಇರುತ್ತದೆ. ಈ ಹಿಂದೆ ಕರೋನಾ ಬಗ್ಗೆ ಮೊದಲೇ ಹೇಳಿದ್ದೆ. ರೋಗ ಬರುತ್ತದೆ, ಜನರು ಸಾಯುತ್ತಾರೆ. ಮದ್ದಿಲ್ಲದ ವ್ಯಾದಿ ಬರುತ್ತದೆ. ಎಚ್ಚೆತ್ತುಕೊಳ್ಳಬೇಕು ಎಂದಿದ್ದೆ. ಎಷ್ಟು ಜನರು ಸತ್ತರು ಅಲ್ವೆ? ಈಗಲೂ ಹೇಳುತ್ತಿದ್ದೇನೆ ಅಂತ ಒಂದು ರೋಗ ಬರುವ ಸಾಧ್ಯತೆ ಇದೆ. ಐದು ವರ್ಷ ಕಾಡುತ್ತದೆ. ಹುಷಾರಾದರೆ ಹೋಗಬಹುದು ಎಂದು ತಿಳಿಸಿದರು.

ಗೌರಿಶಂಕರ ಸುನಾಮಿ ಆದೀತು ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರದ ರಾಷ್ಟçಗಳಿಗೆ ಅಪಾಯ ಇದ್ದು, ಜಲಬಾಧೆ ಎದುರಾಗಲಿದೆ. ದೊಡ್ಡ ದೊಡ್ಡ ನಾಯಕರಿಗೆ ಅಪಾಯ ಇದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ. ಜಗತ್ತಿನ ಎರಡ್ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಟಾಪ್ ಪೊಲಿಟಿಕಲ್ ಜನರಿಗೆ ಇದೆ. ಅವರನ್ನು ಕೊಲ್ಲಬಹುದು ಇಲ್ಲವೇ ಅಪಘಾತದಲ್ಲಿ ಸಾಯಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net