ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ

bkt-14-6
ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಶನಿವಾರ ವಿಕಸಿತ ಭಾರತ ಮೋದಿ ಸರ್ಕಾರ ೧೧ ವರ್ಷದ ಸಾಧನಾ ಅಭಿಯಾನದ ಕುರಿತು ನಡೆದ ಕಾರ್ಯಾಗಾರದಲ್ಲಿ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published on

ಬಾಗಲಕೋಟೆ: ಮುಂಬರುವ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದ್ದು, ಮತ್ತೆ ರಾಜ್ಯದಲ್ಲಿ ಅಽಕಾರಕ್ಕೆ ಬಂದೆ ಬರುವ ವಿಶ್ವಾಸವಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಶನಿವಾರ ವಿಕಸಿತ ಭಾರತ ಮೋದಿ ಸರ್ಕಾರ ೧೧ ವರ್ಷದ ಸಾಧನಾ ಅಭಿಯಾನದ ಕುರಿತು ನಡೆದ ಕಾರ್ಯಾಗಾರ ಭಾರತ ಮಾತೆಗೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿಯವರಿಂದಾಗಿ ಇಂದು ಇಡಿ ಜಗತ್ತೆ ಭಾರತ ದತ್ತ ತಿರುಗಿ ನೋಡುತ್ತಿದೆ. ಜಾಗತಿಕವಾಗಿ ಭಾರತ ಪ್ರಭಲವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಮತ ಕ್ಷೇತ್ರಗಳಲ್ಲಿಯೂ ಭಾರತೀಯ ಜನತಾ ಪಾರ್ಟಿ ಗೆದ್ದು ಅಽಕಾರದ ಗದ್ದುಗೆ ಹಿಡಿಯಲಿದೆ ಎಂಬ ವಿಶ್ವಾಸವಿದೆ, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನ್ಮೋಕರಾಗೋಣ ಎಂದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಸದೃಢ ಹಾಗೂ ಸಮೃದ್ಧ್ದ ಭಾರತ ಕಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೆಂದ್ರ ಮೋದಿ ಅವರ ನೇತೃತ್ವದ ೧೧ ವರ್ಷಗಳ ಆಡಳಿತ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಮೈಲಿಗಲ್ಲಾಗಿದೆ. ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಉದ್ಯೋಗಾವಕಾಶ ಸೃಷ್ಟಿಸಿ, ಹಲವು ಯೋಜನೆಗಳ ಮೂಲಕ ಎಲ್ಲರ ಜತೆ ಎಲ್ಲರ ವಿಕಾಸದ ಸಂಕಲ್ಪಿತ ಗುರಿ ಸಾಽಸಿರುವ ಹೆಮ್ಮೆಯ ಪ್ರಧಾನ ಮಂತ್ರಿಯವರ ಕೇಂದ್ರದ ಯೋಜನೆಗಳು ಶತಮಾನದ ಶಾಶ್ವತ ಹೆಜ್ಜೆ ಗುರುತುಗಳಾಗಿವೆ ಎಂದು ತಿಳಿಸಿದರು.

ವಿಕಸಿತ ಭಾರತ ಮೋದಿ ಸರ್ಕಾರ ೧೧ವರ್ಷದ ಸಾಧನಾ ಅಭಿಯಾನದ ಜಿಲ್ಲಾ ಸಹ ಸಂಚಾಲಕ ನಂದು ಗಾಯಕವಾಡ ಮಾತನಾಡಿ, ದೇಶದಲ್ಲಿ ಅಟಲ್ ಬಿಹಾರಿ ವಾಜಪಾಯಿ ಅವರಿಂದ ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶ ಕಂಡ ಪ್ರಗತಿ ಅದ್ಭುತ್‌ವಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೋದಿಯವರಿಂದಾದ ದೇಶದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವಿಧ ಕೇಂದ್ರದ ಯೋಜನಗೆಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ನಮ್ಮ ಪ್ರಧಾನ ಮಂತ್ರಿ ಅವರದ್ದು ಎಂದು ಹೇಳಿದರು.

ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಅಭಿಯಾನದ ಜಿಲ್ಲಾ ಸಹ ಸಂಚಾಲಕ ಬಸವರಾಜ ಅವರಾದಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಮುಖಂಡರಾದ ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ ಶಿಂಧೆ, ಬಸವರಾಜ ಯಂಕAಚಿ, ಲಕ್ಷಿ÷್ಮÃ ನಾರಾಯಣ ಕಾಸಟ್, ಮುತ್ತಣ್ಣ ಬೆಣ್ಣೂರ ಇತರರು ಇದ್ದರು. ಉಮೇಶ ಹಂಚಿನಾಳ ನಿರೂಪಿಸಿದರು, ಮಲ್ಲೇಶ ವಿಜಾಪುರ ಸ್ವಾಗತಿಸಿದರು, ಕಲ್ಲಪ್ಪ ಭಗವತಿ ಪ್ರತಿಜ್ಞಾವಿ ಭೋದಿಸಿದರು, ಮುತ್ತು ಸಿಮಿಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net