

ಬಾಗಲಕೋಟೆ: ರಾಜ್ಯದ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಕಳೆದ ೧೦ ವರ್ಷದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ೪೦ ಸಾವಿರ ಕೋಟಿ ರೂ. ಅನುದಾನ ರಾಜ್ಯಕ್ಕೆ ರೈಲ್ವೆ ಅಭಿವೃದ್ಧಿಗೆ ನೀಡಿದೆ ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಪುನರ್ ಅಭಿವೃದ್ಧಿಗೊಂಡ ಇಲ್ಲಿನ ಬಾಗಲಕೋಟೆ ರೈಲು ನಿಲ್ದಾಣ ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈ ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಕೆ ಮಾಡಿದರೇ ನಮ್ಮ ಮೋದಿ ಸರ್ಕಾರ ರೈಲ್ವೆ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ, ಅಭಿವೃದ್ಧಿಯ ಪರ್ವ ಆರಂಭಿಸಿದೆ. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಹಲವು ಅಭಿವೃದ್ಧಿ ಮಾಡಿದೆ. ಹೊಸ ಮಾರ್ಗಗಳ ನಿರ್ಮಾಣ, ವಿದ್ಯುತ್ತೀಕರಣ, ಭೂ ಸ್ವಾಽÃನ, ರೈಲು ನಿಲ್ದಾಣ ಹೈಟೆಕ್‌ಗೊಳಿಸುವುದು, ಸ್ವಚ್ಛತೆ ಸೇವೆಯಲ್ಲಿ ದೃಢ ಸಂಕಲ್ಪ ಮಾಡಿ ಕೆಲಸ ಮಾಡುತ್ತಿದೆ.
ದೇಶದಾದ್ಯಂತ ೧೦೩ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ನಿಲ್ದಾಣ ಯೋಜನೆಯಡಿ ೧೫೦೦೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಲೋಕಾರ್ಪಣೆಗೊಳಿಸಿದ್ದಾರೆ. ಅದರಲ್ಲಿ ರಾಜ್ಯದ ಬಾಗಲಕೋಟೆ, ಮುನರಾಬಾದ್, ಗದಗ, ದಾರವಾಡ ಹಾಗೂ ಗೋಕಾಕ ಸೇರಿದ್ದು, ಈ ಭಾಗದ ೧೩ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಿಗೆ ೩೦೦ ಕೋಟಿ ವೆಚ್ಚದಲ್ಲಿ ಆಧುನಿಕರಣಗೊಳಿಸಲಾಗುತ್ತಿದೆ. ಗದಗ-ವಾಡಿ, ಕುಡಚಿ-ಬಾಗಲಕೋಟೆ ಸೇರಿದಂತೆ ರಾಷ್ಟçದಲ್ಲಿ ೪೪೪೦೦೦ ಕಿ.ಮೀ ಹೊಸ ಮಾರ್ಗಗಳನ್ನು ನಿರ್ಮಿಸಲು ೭.೫೦ ಲಕ್ಷ ಕೋಟಿ ರೂ.ಗಳ ಯೋಜನೆ ಕೈಗೆತ್ತಿಗೊಳ್ಳಲಾಗಿದೆ ಎಂದು ತಿಳಿಸಿದರು.
ಬಾಗಲಕೋಟೆ ರೈಲು ನಿಲ್ದಾಣವನ್ನು ೧೬ ಕೋಟಿ ರೂ. ವೆಚ್ಚದಲ್ಲಿ ಜಿ-ಪ್ಲಸ್ ೧ ಅತ್ಯಾಧುನಿಕಗೊಳಿಸಲಾಗಿದೆ. ಸುಗಮ ಸಂಚಾರಕ್ಕೆ ೧೨ ಮೀಟರ್ ಅಗಲದ ಪಾದಾಚಾರಿ ಮೇಲ್ಸೆಸುತುವೆ ನಿರ್ಮಾಣ, ಸುಲಭ ಪ್ರವೇಶಕ್ಕಾಗಿ ೨ ಲಿ-ï್ಟಗಳು, ೨ ಎಕ್ಸಲೇಟರಗಳ ಅಳವಡಿಕೆ, ಹೊಸ ಮೇಲ್ಚಾಚವಣಿ ಮತ್ತು ನೆಲಹಾಸಿನೊಂದಿಗೆ ಪ್ಲಾಟ -Áರ್ಮಗಳ ಉನ್ನತೀಕರಣ, ಕೆ-ೆಟೇರಿಯಾ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ವಿಐಪಿ ಲಾಂಚ್, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಕಾಯುವ ಕೊಠಡಿ, ಉಚಿತ ವೈ--ÉÊ ಸೌಲಭ್ಯ, ಸ್ಥಳೀಯ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು, ಅಂಗವಿಕಲರಿಗೆ ರ‍್ಯಾಂಪಗಳು, ಶೌಚಗೃಹ ವ್ಯವಸ್ಥೆ ಸೇರಿದಂತೆ ಮಾದರಿಯಾಗಿ ನಿಲ್ದಾಣ ನಿರ್ಮಿಸಲಾಗಿದೆ.
ಸಂಸದರಾದ ಪಿ.ಸಿ.ಗದ್ದಿಗೌಡರ, ಗೋವಿಂದ ಕಾರಜೋಳ, ಶಾಸಕ ಸಿದ್ದು ಸವದಿ, ವಿ.ಪ ಸದಸ್ಯರಾದ ಪಿ.ಎಚ್.ಪೂಜಾರ, ಹನುಮಂತ ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಹುಬ್ಬಳ್ಳಿ ರೈಲ್ವೆ ವಿಭಾಗದ ವ್ಯವಸ್ಥಾಪಕಿ ಬೆಲಾ ಮೀನಾ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ಬಾಗಲಕೋಟೆ ರೈಲ್ವೆ ನಿಲ್ದಾಣದ ಎಸ್‌ಆರ್ ಅರವಿಂದ ಹರ‍್ಲೇ ಸೇರಿದಂತೆ ಇತರರು ಉಪಸ್ಥಿತರಿದ್ದರು.