

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ಜನ ಔಷಽ ಕೇಂದ್ರಗಳನ್ನು ಮುಚ್ಚುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ವತಿಯಿಂದ ನವನಗರದ ಜಿಲ್ಲಾ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದೇಶ ಹಿಂಪಡೆಯದಿದ್ದರೇ ರಾಜ್ಯ ವ್ಯಾಪಿ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಕೇಂದ್ರ ಸರ್ಕಾರವು ಬಡವರು, ಮಧ್ಯಮ ವರ್ಗದ ಕುಟುಂಬಕ್ಕೆ ಕಡಿಮೆ ಬೆಲೆಯಲ್ಲಿ ಔಷಽ ದೊರೆಯಲಿ ಎನ್ನುವ ಕಾರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಜನ ಔಷಽ ಮಳಿಗಳನ್ನು ಸ್ಥಾಪಿಸಿದೆ. ಕಳೆದ ೭-೮ ವರ್ಷದಲ್ಲಿ ಸಾಕಷ್ಟು ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೇ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಹಗೆತನ ಸಾಽಸುವ ಉದ್ದೇಶ ಮಳಿಗೆ ಬಂದ ಮಾಡಲು ಹೊರಟಿಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವುದು ಜನ ವಿರೋಽ ಸರ್ಕಾರ, ಇದು ಮೇಡಿಕಲ್ ಮಾಪಿಯಾ ಗ್ಯಾಂಗ್‌ಗೆ ಬಲಿಯಾಗಿದೆ, ಜನ ಔಷಽ ಕೇಂದ್ರಗಳನ್ನು ಮುಚ್ಚುವ ನಿರ್ಧಾರವನ್ನು ರದ್ದು ಮಾಡಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಪರವಾನಗಿಯನ್ನು ಮುಂದುವರೆಸುವ ಮೂಲಕ ಬಡವರ ಪರವಾಗಿ ನಿಲ್ಲಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಗುಡುಗಿದರು.
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಪ್ರಧಾನ ಮಂತ್ರಿ ಜನ ಔಷಽ ಯೋಜನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟçದ ಬಡ, ಕೆಳವರ್ಗ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಕಾಳಜಿ ಹಾಗೂ ದೂರದರಷ್ಟಿಯಂದ ಜಾರಿಗೊಳಿದ್ದಾರೆ. ಆದರೆ ಕರ್ನಾಟಕ ಸರ್ಕಾರವು ಮೆಡಿಕಲ್ ಮಾಫಿಯಾಗೆ ಬಲಿಯಾಗಿ ಜನ ಔಷಽ ಕೇಂದ್ರಗಳನ್ನು ಮುಚ್ಚುವ ತಿರ್ಮಾನ ತೆಗೆದುಕೊಂಡಿರುವುದು ದುರದುಷ್ಟಕರ ಸಂಗತಿ. ಕೂಡಲೆ ರಾಜ್ಯ ಸರ್ಕಾರ ಮುಚ್ಚುವ ನಿರ್ಧಾರದ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕಪ್ಪು ಪಟ್ಟಿ ಧರಿಸಿ ಬಿಜೆಪಿ ಕಾರ್ಯಕರ್ತರು, ನಾಯಕರು ಭಾಗವಹಿಸಿದ್ದರು.ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷತೆ ಶೋಭಾ ರಾವ್, ಸದಸ್ಯರಾದ ಶಶಿಕಲಾ ಮಜ್ಜಗಿ, ಬಸವರಾಜ ಅವರಾದಿ, ಯಲ್ಲಪ್ಪ ನಾರಾಯಣಿ, ಡಾ.ಎಂ.ಎಸ್.ದಡ್ಡೆನ್ನವರ, ಗುಂಡುರಾವ ಶಿಂಧೆ, ಬಸಲಿಂಗಪ್ಪ ನಾವಲಗಿ, ರಾಜು ನಾಯ್ಕರ, ಬಸವರಾಜ ಯಂಕAಚಿ, ಬಸವರಾಜ ಹುನಗುಂದ, ಪ್ರಭು ಹಡಗಲಿ, ಶ್ರೀಧರ ನಾಗರಬೆಟ್ಟ, ಸುರೇಶ ಮಜ್ಜಗಿ, ಚೆನ್ನಯ್ಯ ಹಿರೇಮಠ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ವಿಜು ಅಂಗಡಿ, ಸತ್ಯನಾರಾಯಣ ಹೆಮಾದ್ರಿ, ವೀರಣ್ಣ ಹಳೆಗೌಡರ, ಮಹೇಶ ಅಂಗಡಿ, ವಿಜಯ ಕಣ್ಣೂರ, ಗುರು ಚಳ್ಳಿಮರದ, ಸುಭಾಸ ರಾಮೋಡಗಿ, ಮುತ್ತು ಸೀಮಿಕೇರಿ, ಮಂಜು ಗೌಡರ, ಉಮೇಶ ಲಮಾಣಿ, ಕೀರಣ ಬಾಗೇವಾಡಿ, ಆನಂದ ಕೋಟಗಿ, ಚಂದ್ರು ಸರೂರ, ಪರಮೇಶ್ವರ ಮದುರ, ಸಾಗರ ಬಂಡಿ, ವೀರಣ್ಣ ಶಿರಗನ್ನವರ ಸೇರಿದಂತೆ ಇತರರು ಇದ್ದರು.