ರಾಜ್ಯ ಸರ್ಕಾರ ಧ್ವನಿ ಎತ್ತಿಲ್ಲ

bkt-14-3
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಕದಂಬ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಬೇಕ್ರಿ ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ದುಂಡಪ್ಪ ಯರಗಟ್ಟಿ, ಸಲ್ಮಾನ್ ಬಿ, ಎಂ.ಪಿ.ಮುಳಗುಂದ, ಗವಿಶಿದ್ದಯ್ಯ ಹಳ್ಳಿಕೇರಿಮಠ ಇತರರು ಇದ್ದರು.
Published on

ಬಾಗಲಕೋಟೆ: ಹಿಂದಿ ಭಾಷಾ ಹೇರಿಕೆ ವಿರುದ್ಧ ರಾಜ್ಯ ಸರ್ಕಾರಗಳು ಇದುವರೆಗೂ ಧ್ವನಿ ಎತ್ತಲೇ ಇಲ್ಲ. ನಮಗೆ ತ್ರಿಭಾಷೆ ಸೂತ್ರಬೇಡ, ದ್ವಿಭಾಷೆ ಸೂತ್ರ ಬೇಕು ಎಂದು ಕದಂಬ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಬೇಕ್ರಿ ರಮೇಶ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳಿಗೆ ತನ್ನದೆಯಾದ ಭಾಷೆ, ಪ್ರಾದೇಶಿಕತೆ, ಇತಿಹಾಸ, ಪರಂಪರೆ ಹೊಂದಿವೆ. ಹಿಂದಿ ಭಾಷೆ ಒಪ್ಪಲು ಸಾಧ್ಯವಿಲ್ಲ. ಕೇಂದ್ರದ ನೀತಿ ವಿರುದ್ಧ ರಾಜ್ಯ ಸರ್ಕಾರ ಹೋರಾಟ ನಡೆಸಬೇಕು. ಕನ್ನಡ ಅಸ್ಮಿತೆ ಸರ್ಕಾರ ಕಾಪಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ರೈಲು, ಬ್ಯಾಂಕ್‌ಗಳು ಎಲ್ಲಾ ಕಡೆ ಹಿಂದಿ ಭಾಷಿಕರಿಗೆ ಶೇ.೮೦ ರಷ್ಟು ಉದ್ಯೋಗ ನೀಡಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬಾರಿ ವಂಚನೆ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ÷್ಯ ವಹಿಸಿದೆ. ಆದರೆ ನಿಜವಾಗಲೂ ಹೇರಿಕೆ ಕನ್ನಡಿಗರ ಮೇಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡಿಗರು ಪ್ರಭಲವಾಗಿ ದಿಕ್ಕರಿಸಲು ಎಡ-ಬಲ ಪಂಥಗಳ ನಾಯಕರು, ಕಾರ್ಯಕರ್ತರು ಎಲ್ಲಾ ರಾಜಕೀಯ ನಾಯಕರು, ಕಾರ್ಯಕರ್ತರು, ರಾಷ್ಟ್ರೀಯ ವಾದಿಗಳು ಮುಂಚುವಣೆಯಲ್ಲಿರುವ ವಿದ್ಯಾರ್ಥಿ ಸಂಘಟನೆಗಳು ಪರೋಕ್ಷವಾಗಿ ಪ್ರಾದೇಶಿಕತೆಯನ್ನು ಬಲವಾಗಿ ವಿರೋಽಸುವರೆ ಆಗಿದ್ದಾರೆ. ಇದೆ ಕನ್ನಡ ಭಾಷೆಗೆ ದೊಡ್ಡ ಅಪಾಯವಾಗಿದೆ. ನಮ್ಮ ತಾಯಿ ಭಾಷೆ ಉಳಿಯಬೇಕಾದರೆ ಹಿಂದಿ ಹೇರಿಕೆ ಇತರ ಭಾಷೆಗಳ ಒತ್ತಾಯ ಪೂರ್ವಕ ಹೇರಿಕೆಯನ್ನು ಶತಾಯ ಗತಾಯ ಪ್ರಬಲವಾಗಿ ಪ್ರತಿಭಟಿಸುವುದಲ್ಲದೆ ತಡಗಟ್ಟಲೇ ¨ ೆÃಕು. ಆದ್ದರಿಂದ ಕನ್ನಡಿಗರಿಗೆ ಉದ್ಯೋಗ ದಕ್ಕಬೇಕಾದರೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ತಿಳಿಸಿದರು.

ಮುಖಂಡರಾದ ದುಂಡಪ್ಪ ಯರಗಟ್ಟಿ, ಸಲ್ಮಾನ್ ಬಿ, ಎಂ.ಪಿ.ಮುಳಗುಂದ, ಗವಿಶಿದ್ದಯ್ಯ ಹಳ್ಳಿಕೇರಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net