

ಬಾಗಲಕೋಟೆ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರ ನೇತೃತ್ವದಲ್ಲಿ ವಿಡಿಯೋಗ ವಚ್ರ್ಯೂವಲ್ ಮೂಲಕ ಪ್ರಬಂಧ ಹಾಗೂ ಭಿತ್ತಿಚಿತ್ರ ಸ್ಪರ್ಧೆಗಳು ಗುರುವಾರ ಜರುಗಿದವು.
ರಾಜ್ಯದ ಎಲ್ಲ ಜಿಲ್ಲೆಗಳು ಏಕಕಾಲದಲ್ಲಿ ವಿಡಿಯೋ ವಚ್ರ್ಯೂಚಲ್ ಮೂಲಕ ನಡೆದ ಸ್ಪರ್ಧೆಗಳಲ್ಲಿ ಬಾಗಲಕೋಟೆಯಿಂದ ಒಟ್ಟು 9 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೌಢಶಾಲಾ ವಿಭಾಗದಿಂದ ಮೈತ್ರಾವತಿ ಸೀಮಿಕೇರಿ (ಪ್ರಬಂಧ ಕನ್ನಡ), ಅಂಕಿತಾ ಪೊಲೀಸ್ ಪಾಟೀಲ (ಪ್ರಬಂಧ ಇಂಗ್ಲೀಷ), ಆಫೀಯಾ ಮಹಾತ (ಭಿತ್ತಿಚಿತ್ರ) ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪದವಿ ಪೂರ್ವ ವಿಭಾಗದಿಂದ ಪ್ರೇಮಾ ಮೀಶಿ (ಪ್ರಬಂಧ ಕನ್ನಡ), ಅನಿಶಾ ನದಾಪ್ (ಪ್ರಬಂಧ ಇಂಗ್ಲೀಷ), ಪ್ರತಿಭಾ ಸಜ್ಜನ (ಭಿತ್ತಿಚಿತ್ರ) ಹಾಗೂ ಪದವಿ ವಿಭಾಗದಿಂದ ದ್ಯಾಮಣ್ಣ ಕಂಬಾರ (ಪ್ರಬಂಧ ಕನ್ನಡ), ಅಂಜಲಿ ಆಲಗುಂಡಿ (ಪ್ರಬಂಧ ಇಂಗ್ಲೀಷ), ರಮೇಶ ಆಲೂರ (ಭಿತ್ತಿಚಿತ್ರ) ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತರ ಆಯ್ಕೆಗೆ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ಸ್ಪರ್ಧೆಗಳು ಮುಗಿದ ನಂತರ ವಿದ್ಯಾರ್ಥಿಗಳ ಭಿತ್ತಿಚಿತ್ರಗಳನ್ನು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಮ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸ್ಪರ್ಧೆಯ ಮೇಲ್ವಿಚಾರಕರಾದ ಪಿ.ಎಸ್.ಚವ್ಹಾಣ, ಜೆ.ಬಿ.ಕುಲಕರ್ಣಿ, ಎಸ್.ಎಸ್.ಹಡಗಲಿ ಹಾಗೂ ವಿದ್ಯಾರ್ಥಿಗಳು ಇದ್ದರು.