ರಾಜ್ಯ ಮಟ್ಟದ ಕ್ರೀಡಾಕೂಟಕ್ಕ ಆಯ್ಕೆ

24-KGL-4,,
Published on

ಕೊಳ್ಳೇಗಾಲ: ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕೊಳ್ಳೇಗಾಲ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 45 ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಷಟ್‌ಲ್ ಬ್ಯಾಡ್ಮಿಂಟನ್‌ನಲ್ಲಿ ಎಸ್.ಇ ಯಶಸ್ ಮತ್ತು ತಂಡ ಪ್ರಥಮ ಸ್ಥಾನ, ಖೋ ಖೋ ಸ್ಪರ್ಧೆಯಲ್ಲಿ ಬಿ.ಹರ್ಷ ಮತ್ತು ತಂಡ ಪ್ರಥಮ ಸ್ಥಾನ. ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಅಲೆಕ್ಸ್ ಜೋನಾಥನ್ ಮತ್ತು ತಂಡ ಪ್ರಥಮ ಸ್ಥಾನ, ಬಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿ ಎಂ.ಮೋನಿಷಾ ಮತ್ತು ತಂಡ ಪ್ರಥಮ ಸ್ಥಾನ, ಚೆಸ್‌ನಲ್ಲಿ ಸಿ.ಎಸ್. ಸಂಜಯ್ ಪ್ರಥಮ, ಕರಾಟೆಯಲ್ಲಿ ಜೀವನ್ ನಾಯಕ ಮತ್ತು ಕಾರ್ತಿಕ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಯಶ್ವಿನ್ ಪ್ರಥಮ, ಹ್ಯಾಂಡ್‌ಬಾಲ್‌ನಲ್ಲಿ ಅಲೆಕ್ಸ್ ಜೋನಾಥನ್ ಮತ್ತು ಕಿರಣ್ ಪ್ರಥಮ, ಫೋಬಾಲ್‌ನಲ್ಲಿ ವರುಣ್ ಮತ್ತು ತಂಡ ದ್ವಿತೀಯ, ವಾಲಿಬಾಲ್‌ನಲ್ಲಿ ಲಿಖಿತ್ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅಥ್ಲೆಟಿಕ್ಸ್ ವಿಭಾಗದಲ್ಲಿ ಸ್ಟೀಫನ್ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ, ಯೋಗೇಶ್ವರ್ ಹ್ಯಾಮರ್ ಥ್ರೋನಲ್ಲಿ ಪ್ರಥಮ, ಚಂದನ್ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ, ದಿಗಂತ್ 400ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್, ಉಪಾಧ್ಯಕ್ಷೆ ರೂಪಾ ದತ್ತೇಶ್, ವಿಶೇಷಾಧಿಕಾರಿ ನಾಗಭೂಷಣ್, ಸಂಯೋಜನಾಧಿಕಾರಿ ರಾಮಕೃಷ್ಣ, ಪ್ರಾಂಶುಪಾಲ ಡಿ. ಕೃಷ್ಣಗೌಡ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net