ರಾಜ್ಯ ಮಟ್ಟಕ್ಕೆ ಕಾರ್ನರ್ ಸ್ಟೋನ್ ಪಪೂ ಕಾಲೇಜು ವಿದ್ಯಾರ್ಥಿಗಳು

22-KGL-3,
Published on

ಕೊಳ್ಳೇಗಾಲ: ಇತ್ತೀಚೆಗೆ ನಡೆದ 2025-26 ನೇ ಸಾಲಿನ ಚಾಮರಾಜನಗರ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪಟ್ಟಣದ ಕಾರ್ನರ್ ಸ್ಟೋನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದ ಟೆನ್ನಿಕಾಯ್ಟಿ ಕ್ರೀಡೆಯಲ್ಲಿ ರವೀಶ್ ಮತ್ತು ತಂಡ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಟೆನ್ನಿಕಾಯ್ಟಿ ಸ್ಪರ್ಧೆಯಲ್ಲಿ ದರ್ಶಿನಿ ಮತ್ತು ತಂಡ ದ್ವಿತೀಯ ಸ್ಥಾನ, ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಮೇಘವಿ ಮತ್ತು ತಂಡ ಪ್ರಥಮ, ಉದ್ದ ಜಿಗಿತ ಸ್ಪರ್ಧೆಯಲ್ಲಿ ಸುಶ್ಮಿತಾ ಪ್ರಥಮ, ತ್ರಿವಿಧ ಜಿಗಿತ ದಲ್ಲಿ ಸುಶ್ಮಿತಾ ಪ್ರಥಮ, 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ರಿತೀಶ್ ದ್ವಿತೀಯ ಸ್ಥಾನ, 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಪಿ. ಕವಿತಾ ಪ್ರಥಮ, ಖೋ ಖೋ ಸ್ಪರ್ಧೆಯಲ್ಲಿ ಕವಿತಾ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕ್ರೀಡಾಪಟುಗಳನ್ನು ಕಾಲೇಜಿನ ಆಡಳಿತ ಮಂಡಳಿಯ ಚೇರ್ಮನ್ ಎನ್.ಮಹೇಶ್, ಅಧ್ಯಕ್ಷ ರೂಬೇನ್ ಮೋಸಸ್, ಪ್ರಾಂಶುಪಾಲ ಹಾಗೂ ಕಾರ್ಯದರ್ಶಿ ಡಾ.ರೋಷನ್ ಪ್ರಿನ್ಸ್ ಹಾಗೂ ಟ್ರಸ್ಟಿ ಪವನ್ ಮತ್ತು ಅರುಣ್ ಅಭಿನಂದಿಸಿದ್ದಾರೆ.

==========

22ಕೆಜಿಎಲ್ -3

ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪಟ್ಟಣದ ಕಾರ್ನರ್ ಸ್ಟೋನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net