

ಬಾಗಲಕೋಟೆ: ಸಿಎಂ ಸಿದ್ದರಾಯ್ಯ ರಾಜಿನಾಮೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕ ದಿಂದ ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಜರುಗಿತು.
ಪ್ರತಿಭಟನಾ ಸಭೆ ಉದ್ದೇಶಿಸಿ ಶಾಸಕ ಮಹೇಶ ತೆಂಗಿನಕಾಯಿ ಮಾತನಾಡಿ, ರಾಜ್ಯಪಾಲರಿಗೂ ಗೊಬ್ಯಾಕ್ ಎಮದು ಅವಮಾನ ಮಾಡುವಂತಕ್ಕೆ ಕಾಂಗ್ರೆಸ್ಸಿನವರು ನಡೆದುಕೊಂಡರು. ಆದರೆ ರಾಜ್ಯದ ಉಚ್ಚ ನ್ಯಾಯಾಲಯ ತೀರ್ಪು ರಾಜ್ಯಪಾಲರ ಕ್ರಮ ಸೂಕ್ತವಾಗಿದ್ದು ನ್ಯಾಯದ ಪರಾವಾಗಿದೆ. ತೀರ್ಪಿಗೆ ಗೌರವ ಕೊಟ್ಟ ಕೂಡಲೆ ರಾಜಿನಾಮೆ ನಿಡಬೇಕು. ಇದೂ ಮೂಡಾ ಹಗರಣ ಅಷ್ಟೆ, ವಾಲ್ಮೀಕಿ ಹಗರಣ ಬಾಕಿ ಇದೆ. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವರೆಗೂ ಹೋರಾಟ ನಿಲ್ಲದು ಎಂದು ತಿಳಿಸಿದರು.
ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಮಾತನಾಡಿ, ಸಿದ್ದರಾಮಯ್ಯ ಹಾಗೂ ಇಡಿ ಕಾಂಗೆಸ್ ಸರ್ಕಾರ ಇದರಲ್ಲಿ ನೇರ ಭಾಗಿಯಾಗಿದೆ. ಇದು ವೈಯಕ್ತಿತ ಲಾಭಮಾಡಿಕೊಳ್ಳುವ ಕಾಂಗ್ರೆಸ್ ಸರ್ಕಾರವಾಗಿದೆ. ಸಿದ್ದರಾಮಯ್ಯನನವರಿಗೆ ರಾಜೀನಾಮೆ ನೀಡುವುದು ಅನಿವಾರ್ಯ. ಜನರಪರವಾಗಿ ಆಡಳಿತ ಇಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ. ಜನರಿಗೆ ಸತ್ಯ ಅರ್ಥವಾಗಿದೆ ಎಂದರು.
ಬಿಜಿಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಹಿಂದೂಳಿದ ವರ್ಗಗಳ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ತೀರ್ಪಿಗೆ ಗೌರವ ಕೋಟ್ಟು ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು. ಕಾಂಗ್ರೆಸ್ ಸರ್ಕಾರ ಹಲವಾರು ಸಚಿವರ ಮೇಲೆ ಹಗರಣಗಳು ಬೆಳಕಿಗೆ ಬರುತ್ತೀವೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರ ಮೇಲು ಇಂದು ಹಗರಣ ಬಯಲಾಗುತ್ತಿದೆ. ಇದನೆಲ್ಲವನ್ನೂ ನೋಡಿದರೆ ಈ ಸರ್ಕಾರ ರಾಜ್ಯದಲ್ಲಿ ಬಹಳದಿನ ಉಳಿಯುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಜಿ.ಎನ್.ಪಾಟೀಲ. ಡಾ.ಎಂ.ಎಸ್.ದಡ್ಡೆನ್ನವರ. ಲಕ್ಷ್ಮೀ ನಾರಾಯಣ ಕಾಸಟ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ, ಶಿವಾನಂದ ಟವಳಿ, ಸತ್ಯನಾರಾಯಣ ಹೆಮಾದ್ರಿ, ರಾಜು ಮುದೇನೂರ, ಮುತ್ತಣ್ಣ ಬೆಣ್ಣೂರ ಸೇರಿದಂತೆ ಇತರರು ಇದ್ದರು.