ರಾಜೀ ಸಂಧಾನ ೨೮೦೨೯ ಪ್ರಕರಣಗಳು ಇತ್ಯರ್ಥ

bkt-15-2
ಬಾಗಲಕೋಟೆ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಮೊರೆ ಹೋಗಿದ್ದ ಜೋಡಿಗಳನ್ನು ಒಂದು ಮಾಡಲಾಯಿತು. ನ್ಯಾಯಾಧೀಶರಾದ ಎಸ್.ಬಿ.ರೆಹಮಾನ್, ಜಿ.ಎ.ಮೂಲಿಮನಿ, ಕೃಮೂರ್ತಿ ಪಡಸಲಗಿ, ಹೇಮಾ ಪಸ್ತಾಪುರ, ಮಹೇಶ ಪಾಟೀಲ, ರಾಜಶೇಖರ ತಿಳಗಂಜಿ, ಮುರಗೇಂದ್ರ ತುಬಾಕೆ, ಪಿ.ಎಚ್.ನಾರಾಯಣಕರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.
Published on

ಬಾಗಲಕೋಟೆ: ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ೫೪೨೦ ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ ೨೨೬೦೯ ಪ್ರಕರಣ ಸೇರಿ ಒಟ್ಟು ೨೮೦೨೯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಇರುವ ೭೯೮೯ ಪೈಕಿ ೫೪೨೦ ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ ೨೯೫೩೩ ಪೈಕಿ ೨೨೬೦೯ ಪ್ರಕರಣ ಸೇರಿ ಒಟ್ಟು ೨೮೦೨೯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು. ಅದಾಲತ್‌ನಲ್ಲಿ ಒಟ್ಟು ೫೧.೦೩ ಕೋಟಿ ರೂ.ಗಳ ಪ್ರಕರಣದ ಮೊತ್ತವಾಗಿತ್ತು. ಅಲ್ಲದೆ ವಿಚ್ಚೇದನ ಕೋರಿ ಬಾಗಲಕೋಟೆ ಹಾಗೂ ಬೀಳಗಿ ನ್ಯಾಯಾಲಯದಲ್ಲಿ ತಲಾ ಒಂದು ಹಾಗೂ ಬನಹಟ್ಟಿ ನ್ಯಾಯಾಲಯದಲ್ಲಿ ೩ ಸೇರಿ ಒಟ್ಟು ೫ ಜೋಡಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕುಟುಂಬ ನ್ಯಾಯಾಲಯದಲ್ಲಿ ರಾಜೀ ಮೂಲಕ ಒಂದು ಮಾಡಲಾಯಿತು.

ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ೨೧೮೭ ಪ್ರಕರಣಗಳ ಪೈಕಿ ೧೬೦೮, ಬೀಳಗಿ ನ್ಯಾಯಾಲಯದಲ್ಲಿ ೧೪೦ ಪೈಕಿ ೮೭, ಮುಧೋಳ ನ್ಯಾಯಾಲಯದಲ್ಲಿ ೬೪೮ ಪೈಕಿ ೫೧೭, ಬನಹಟ್ಟಿ ನ್ಯಾಯಾಲಯದಲ್ಲಿ ೧೧೪೬ ಪೈಕಿ ೬೬೮, ಹುನಗುಂದ ನ್ಯಾಯಾಲಯದಲ್ಲಿ ೪೦೪ ಪೈಕಿ ೨೯೧, ಇಳಕಲ್ಲ ನ್ಯಾಯಾಲಯದಲ್ಲಿ ೪೩೫ ಪೈಕಿ ೩೫೨, ಬಾದಾಮಿ ನ್ಯಾಯಾಲಯದಲ್ಲಿ ೭೩೯ ಪೈಕಿ ೫೫೭ ಹಾಗೂ ಜಮಖಂಡಿ ನ್ಯಾಯಾಲಯದಲ್ಲಿ ೨೨೯೦ ಪೈಕಿ ೧೪೦೦ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಬ್ಯಾಂಕಿಗೆ ಸಂಬಂಧಿಸಿದ ೬೧೩೩ ಪೈಕಿ ೩೦೯ ಪ್ರಕರಣಗಳಿಗೆ ಒಟ್ಟು ೪.೪೦ ಕೋಟಿ ರೂ.ಗಳಿಗೆ ಇತ್ಯರ್ಥಗೊಂಡರೆ, ವಿದ್ಯುತ ಬಿಲ್‌ಗೆ ಸಂಬಧಿಸಿದ ೮೮ ಪೈಕಿ ೮೮ ಇತ್ಯರ್ಥಗೊಂಡು ೨.೭೭ ಲಕ್ಷ ರೂ, ನೀರಿನ ಕರಕ್ಕೆ ಸಂಬಧಿಸಿದ ೯೮೩ ಪೈಕಿ ೫೧ಕ್ಕೆ ೩.೨೫ ಲಕ್ಷ ರೂ, ಕಂದಾಯ ಇಲಾಖೆಗೆ ಸಂಬಂಧಿಸಿದ ೫೧೯ ಪೈಕಿ ೩೬೪ ಪ್ರಕರಣ, ಸಂಚಾರಿ ಉಲ್ಲಂಘನೆಗೆ ಸಂಬಂಧಿಸಿದ ೧೦೧೭೦ ಪೈಕಿ ೧೦೧೭೦ಕ್ಕೆ ೪೨.೨೪ ಲಕ್ಷ ರೂ, ಆಸ್ತಿ ತೆರಿಗೆ ಸಂಬಂಧಿಸಿದಂತೆ ೧೧೬೪೦ ಪೈಕಿ ೧೧೬೨೭ ಪ್ರಕರಣಗಳನ್ನು ೨.೩೦ ಕೋಟಿ ರೂ.ಗಳಿಗೆ ಇತ್ಯರ್ಥಪಡಿಸಲಾಯಿತು.

ಲೋಕ ಅದಾಲತ್ ಶಿಬಿರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಇದ್ದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ರೆಹಮಾನ್, ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮೂಲಿಮನಿ, ಜಿಲ್ಲಾ ಕುಟುಂಬ ನ್ಯಾಯಾಧೀಶ ಕೃಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶೆ ಹೇಮಾ ಪಸ್ತಾಪುರ, ೨ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ೨ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾದೀಶ ರಾಜಶೇಖರ ತಿಳಗಂಜಿ, ಪ್ರಧಾನ ದಿವಾಣಿ ನ್ಯಾಯಾದೀಶ ಮುರಗೇಂದ್ರ ತುಬಾಕೆ, ಹೆಚ್ಚುವರಿ ದಿವಾನಿ ನ್ಯಾಯಾಧೀಶ ಪಿ.ಎಚ್.ನಾರಾಯಣಕರ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net