

ದಾಂಡೇಲಿ: ದಾಂಡೇಲಿಯ 18 ಹಾಗೂ ಹಳಿಯಾಳದ 36 ಜನರನ್ನು ವಿಆರ್ಡಿ ಟ್ರಸ್ಟ್ನ ಬಸ್ಗಳ ಮೂಲಕ ಹುಬ್ಬಳ್ಳಿಗೆ ಕಳಹಿಸಿಕೊಡಲಾಯಿತು. ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ತೆರಳಿದರು.
ಕರೊನಾ ಲಾಕ್ಡೌನ್ನಿಂದ ದಾಂಡೇಲಿ ಹಾಗೂ ಹಳಿಯಾಳದಲ್ಲಿ ಉಳಿದಿದ್ದ ರಾಜಸ್ಥಾನದ ಕೂಲಿಕಾರರು, ವ್ಯಾಪಾರಸ್ಥರು ಹಾಗೂ ಪಾನಿಪುರಿ ಅಂಗಡಿಕಾರರು ವ್ಯಾಪಾರ ವಹಿವಾಟು ಇಲ್ಲದೆ ತಮ್ಮ ಊರುಗಳಿಗೆ ತೆರಳಲು ಕಾತುರರಾಗಿದ್ದರು.
ಊರಿಗೆ ತೆರಳಲು ಶಾಸಕ ಆರ್.ವಿ. ದೇಶಪಾಂಡೆ ಅವರಲ್ಲಿ ಕೇಳಿಕೊಂಡ ಹಿನ್ನೆಲೆಯಲ್ಲಿ ವಿಆರ್ಡಿ ಟ್ರಸ್ಟ್ ಅಧಿಕಾರಿಗಳು ಅವರ ಮಾಹಿತಿಯನ್ನು ಸೇವಾಸಿಂಧು ಆಪ್ನಲ್ಲಿ ಅಪ್ಲೋಡ್ ಮಾಡಿ ಅವರ ಪ್ರಯಾಣಕ್ಕೆ ಅನುಕೂಲ ಮಾಡಿದ್ದಾರೆ. ಈ ವೇಳೆ ಕಾರ್ವಿುಕ ಇಲಾಖೆ ಅಧಿಕಾರಿಗಳು ಇದ್ದರು.