ರಾಜಕೀಯ ಎನ್ನುವುದು ಸಂಘರ್ಷ

bkt-4-2
ಬಾಗಲಕೋಟೆ ನಗರದ ಖಾಸಗಿ ಹೊಟೇಲ ಸಭಾಂಗಣದಲ್ಲಿ ಶನಿವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಡಾ.ದೇವರಾಜ ಪಾಟೀಲ ಮಾತನಾಡಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ಕಾಂಗ್ರೆಸ್ ಮುಖಂಡರಾದ ಬಸವಂತಪ್ಪ ಮೇಟಿ, ಅಜೀಜ್ ಬಾಳಿಕಾಯಿ, ರಜಾಕ ಹಳ್ಳೂರ, ವೈ.ಎಚ್.ಇದ್ದಲಗಿ, ಸಂಗಮೇಶ ಗೌಡರ ಇದ್ದರು.
Published on

ಬಾಗಲಕೋಟೆ: ರಾಜಕೀಯ ಎಂಬುದೇ ಸಂಘರ್ಷ. ಹೀಗಾಗಿ ನನ್ನ ಶಕ್ತಿಯನ್ನು ತೋರಿಸುವ ಕೆಲಸವನ್ನು ಮಾಡುವುದು ಅನಿವಾರ್ಯವಾಗಿದೆ. ಪಕ್ಷದ ಕಾರ್ಯಕರ್ತರು ನನ್ನ ಮಾಲೀಕರಿದ್ದಂತೆ ಅವರ ಅಭಿಪ್ರಾಯ ಪಡೆದು ಚುನಾವಣೆಯಲ್ಲಿ ಸ್ಪಽðಸುವ ಬಗ್ಗೆ ನನ್ನ ತೀರ್ಮಾನ ಪ್ರಕಟಿಸುತ್ತೇನೆ ಎಂದು ಡಾ.ದೇವರಾಜ ಪಾಟೀಲ ಹೇಳಿದರು.

ನಗರದ ಖಾಸಗಿ ಹೊಟೇಲ ಸಭಾಂಗಣದಲ್ಲಿ ಶನಿವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ೨೦೦೮ರಲ್ಲಿ ರಾಜಕೀಯ ಪ್ರವೇಶ ಮಾಡಿದೆ. ಎಚ್.ವೈ.ಮೇಟಿ ಸಾಹೇಬರಿಗೆ ತೊಂದರೆ ಆಗಬಾರದು ಎಂದು ಬಾದಾಮಿ ಹಾದಿ ಹಿಡಿದು ಪಕ್ಷ ಸಂಘಟನೆಯ ಕೆಲಸ ಮಾಡಿದೆ. ೨೦೧೩ರಲ್ಲಿ ಟಿಕೆಟ್ ಘೋಷಣೆ ಆಯಿತು. ಆಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದರಿಂದ ಚಿಮ್ಮನಕಟ್ಟಿ ಅವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿದರೂ ಬಿಟ್ಟುಕೊಟ್ಟೆ. ನಂತರ ಲೋಕಸಭೆಗೂ ನಾನು ಅಭ್ಯರ್ಥಿ ಎಂದು ಘೊಷಣೆಯಾದ ಜಿಲ್ಲೆಯ ನಾಯಕರು ಯಾರಿಗೂ ಮಾತು ಕೊಟ್ಟಿದ್ದಾರೆ ಎಂದು ಹಿಂದಕ್ಕೆ ಸರಿಸಿದರು ಎಂದರು.

ಇನ್ನು ಕಳೆದ ೨೦೧೮ರ ಚುನಾವಣೆಯಲ್ಲಿ ಟಿಕಟೆ ಘೊಷಣೆಯಾದ ನಂತರ ಸಿದ್ದರಾಮಯ್ಯ ತಾವು ಸ್ಪಽðಸುವುದಾಗಿ ಹೇಳಿದ್ದರಿಂದ ಬಿಟ್ಟುಕೊಟ್ಟೆ. ಅವರ ಗೆಲುವಿಗಾಗಿ ಶ್ರಮಿಸಿದೆ. ಒಂದೂ ದಿನವೂ ರೆಸಾರ್ಟ್ಗೆ ಕಾಲಿಡದೆ ಜನರ ಮಧ್ಯೆ ಕೆಲಸ ಮಾಡಿದೆ. ಅಂಚೆ ಪೆಟ್ಟಿಗೆ ಮತದಾನದಲ್ಲಿ ನಡೆಸುತ್ತಿದ್ದ ಗೋಲ್ಮಾಲ್ ತಡೆಯದಿದ್ದರೆ ಸಿದ್ದರಾಮಯ್ಯ ಅವರು ಸೋಲುತ್ತಿದ್ದರು. ಕೆರೂರಿನಲ್ಲಿ ನೇಕಾರರು ಕಾಂಗ್ರೆಸ್ ಬೆಂಬಲಿಸುವಂತೆ ಮಾಡಿದೆ ಆದರೆ ಅವರೇ ನನ್ನನ್ನು ಮರೆತರು ಎಂದರು.

ಈ ಬಾರಿಯೂ ಮುನ್ನಲೆಗೆ ಬಂದಿತ್ತು. ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆದಿಯಾಗಿ ಎಲ್ಲರೂ ನನ್ನ ಹೆಸರು ಸೂಚಿಸಿದರು. ಸಿದ್ದರಾಮಯ್ಯ ಅವರ ಗೆಲುವಿಗೆ ಅಷ್ಟು ಶ್ರಮಿಸಿದರೂ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಅವರಿಗೆ ಒಳ್ಳೆಯದಾಗಲಿ ಎಂದು ನಾನು ಬಯಸುತ್ತೇನೆ. ರಾಜಕೀಯ ಎಂದರೇ ಮೌನವಲ್ಲ. ಸಂಘರ್ಷ ಎನ್ನುವುದು ಅರ್ಥವಾಗಿದೆ ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ವೈ.ಎಚ್.ಇದ್ದಲಗಿ, ಸಂಗಮೇಶ ಗೌಡರ, ತೋಹಿದ ಅಲಿ ಸಂತಿಶಿರೂರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ಅಜೀಜ್ ಬಾಳಿಕಾಯಿ, ರಜಾಕ ಹಳ್ಳೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net