ರಾಘವೇಂದ್ರ ಸ್ವಾಮಿಗಳ ವೈಭವದ ಮಧ್ಯಾರಾಧನೆ

11 CRP-1A
Published on

ಚನ್ನರಾಯಪಟ್ಟಣ: ಪಟ್ಟಣದ ಕೋಟೆ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ನಾಲ್ಕನೇ ದಿನವಾದ ಸೋಮವಾರ ಮಧ್ಯಾರಾಧನೆ ವೈಭವದಿಂದ ನೆರವೇರಿತು.

ಆರಾಧನೆ ಹಿನ್ನೆಲೆಯಲ್ಲಿ ಶ್ರೀ ಮಠದ ಪ್ರಾಂಗಣ ಹಾಗೂ ಮುಂಭಾಗವನ್ನು ವಿದ್ಯುತ್ ದೀಪಗಳು, ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಮಠಕ್ಕೆ ತಾಲೂಕಿನ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಗುರು ದರ್ಶನ ಪಡೆದರು. ಬೆಂಗಳೂರಿನ ಶ್ರೀನಿಧಿ ಆಚಾರ್ಯರ ನೇತೃತ್ವದಲ್ಲಿ ಮುಂಜಾನೆ ಉಷಾಕಾಲ ಪೂಜೆ, ಧಾರ್ಮಿಕ ಕಾರ್ಯಗಳು ಆರಂಭವಾದವು. ಪಂಚಾಮೃತ ಅಭಿಷೇಕ, ರಾಯರ ಪಾದಪೂಜೆ ಹಾಗೂ ಬೃಂದಾವನಕ್ಕೆ ಹೂ ಅಲಂಕಾರ ನೆರವೇರಿತು. ಅಲಂಕಾರ ಪಂಕ್ತಿಯ ಬ್ರಾಹ್ಮಣ ಪೂಜೆ ಮತ್ತು ಮಂಗಳಾರತಿ ಇನ್ನಿತರ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ಸಂಪನ್ನಗೊಂಡವು. ಮಧ್ಯಾರಾಧನೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿಧಿ ಆಚಾರ್ಯ ಅವರಿಂದ ಅಷ್ಟಾವಧಾನ ಮತ್ತು ಸ್ವಸ್ತಿವಾಚನ ಕಾರ್ಯಕ್ರಮ ನೆರವೇರಿತು. ಬಳಿಕ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net