ರಸ್ತೆಗೆ ಬಿದ್ದಿದ್ದ ಮರ ತೆರವು

tree
ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ, ಅರಕಲಿ ರಸ್ತೆ ಮಧ್ಯೆ ಗಾಳಿಗೆ ಉರುಳಿ ಬಿದ್ದಿದ್ದ ಬೃಹತ್ ಗಾತ್ರದ ಮರ.
Published on

ಎನ್.ಆರ್.ಪುರ: ತಾಲೂಕಿನ ಗುಬ್ಬಿಗಾ, ಅರಕಲಿ ರಸ್ತೆಯ ಮೇಲೆ ಭಾನುವಾರ ಗಾಳಿ-ಮಳೆಯಿಂದ ಭಾರಿ ಗಾತ್ರದ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಧರ್ಮಸ್ಥಳ ಯೋಜನೆ ಬಿ.ಎಚ್.ಕೈಮರ ವಲಯ ಶೌರ್ಯ ವಿಪತ್ತು ತಂಡದವರು ಸೋಮವಾರ ಮರ ತೆರವುಗೊಳಿಸಿದರು. ಮರ ಬಿದ್ದಾಗ ವಿದ್ಯುತ್ ಕಂಬ ಮುರಿದು, ತಂತಿ ತುಂಡಾಗಿತ್ತು. ಮಾಹಿತಿ ತಿಳಿದ ತಂಡದ ಸದಸ್ಯರಾದ ಸಾಜು, ಎಲ್ದೋ, ಪ್ರಭಾಕರ, ಶೈನಿ, ಶಿಬಿ, ಚಂದ್ರ, ಎಲಿಯಾಸ್, ಅರಣ್ಯ ಇಲಾಖೆಯ ಸತೀಶ್ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net